ಗೋಕಾಕ ನಗರದ ಹೃದಯಭಾಗದಲ್ಲಿರುವ ಸ್ವಾತಂತ್ರ್ಯ ಯೋಧ ವೀರ ಸಂಗೊಳ್ಳಿ ರಾಯಣ್ಣನ ವೃತ್ತದ ಸುತ್ತಮುತ್ತಲಿನ ಕಂಪೌಂಡ್ ಶಿಥಿಲಗೊಂಡು ತನ್ನ ಸೌಂದರ್ಯ ಕಳೆದುಕೊಳ್ಳುತ್ತಿದೆ. ಇದನ್ನು ಸುಧಾರಣೆ ಮಾಡಲು ಕ್ರಮಕೈಗೊಳ್ಳಬೇಕೆಂದು ಸಂಗೊಳ್ಳಿರಾಯಣ್ಣ ಯುವ ಪಡೆ ಶಾಸಕ ರಮೇಶ್ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದರು
ಇಂದು ಶಾಸಕರ ರಮೇಶ್ ಜಾರಕಿಹೊಳಿ ಅವರ ಗೃಹ ಕಚೇರಿಯಲ್ಲಿ ಸಂಗೊಳ್ಳಿ ರಾಯಣ್ಣ ಯುವ ಪಡೆಯ ನಿಯೋಗ ಭೇಟಿ ನೀಡಿ ಮನವಿ ಸಲ್ಲಿಸಿದೆ. ನಿಯೋಗದಲ್ಲಿ ಪಡೆಯ ಅಧ್ಯಕ್ಷ ಸಂತೋಷ್ ಕಟ್ಟಿಕಾರ ಉಪಾಧ್ಯಕ್ಷ ಅನಿಲ ತುರಾಯಿದಾರ, ಮಾರುತಿ ಜಿಂಗಿ, ಶಶಿ ಕನಪ್ಪನವರ, ಶಿವರಾಜ್ ಕಟ್ಟಿಕಾರ, ರಾಮು ಸನದಿ, ಬೀರಪ್ಪ ಹಟ್ಟಿ, ಬೀರಪ್ಪ ನಿಂಗಾಪುರಿ, ಸಂತೋಷ ಹಟ್ಟಿ, ಪ್ರಮೋದ್ ತುರಾಯಿದಾರ, ಸುರೇಶ್ ಉಳಾಗಡ್ಡಿ, ಅಲ್ಲದೆ ಇನ್ನಿತರ ಸಮಾಜದ ಗಣ್ಯರು ನಿಯೋಗದಲ್ಲಿದ್ದರು ಮನವಿ ಸ್ಪಂದಿಸಿದ ಶಾಸಕ ರಮೇಶ್ ಜಾರಕಿಹೊಳಿ ಅವರು ಸುಧಾರಣೆ ಮಾಡುವ ಭರವಸೆ ನೀಡಿದರು.
CK NEWS KANNADA ಮನವಿ
ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿರುವ ಕಂಪೌಂಡಿಗೆ ದಿನನಿತ್ಯ ನಿಧನರಾದವರ ಬ್ಯಾನರ್ ಕಟ್ಟುವ ಪ್ರವೃತ್ತಿ ಬಂದಿದ್ದು ಇದನ್ನು ನಿಲ್ಲಿಸಲು ನಗರಸಭೆಯವರು ವೃತ್ತದ ದಂಡೆಯಲ್ಲಿ ಸೂಚನಾ ಫಲಕ ಅಳವಡಿಸಿ ಅಲ್ಲಿ ಮಾತ್ರ ನಿಧನದ ವಾರ್ತೆ ಅಥವಾ ಇನ್ನಿತರ ಪ್ರಕಟನೆಗಳನ್ನು ಲಗತ್ತಿಸುವ ಕ್ರಮಕೈಗೊಳ್ಳಬೇಕು ಅಲ್ಲದೆ ಸಂಗೊಳ್ಳಿ ರಾಯಣ್ಣ ವೃತ್ತದ ಕಂಪೌಂಡಿನಲ್ಲಿ ಸುಂದರವಾದ ಗಿಡಗಳನ್ನು ನೆಟ್ಟು ಸೌಂದರ್ಯ ಹೆಚ್ಚಿಸಬೇಕು.