ಗೋಕಾಕ : ತಾಲೂಕಿನ ನಂದಗಾ೦ವ ಗ್ರಾಮದಲ್ಲಿ ಹೆಸ್ಕಾಂನಿ ೦ ದ ಹೊಸದಾಗಿ ನಿರ್ಮಾಣವಾಗಲಿರುವ 2 • 10 ಎಮ್.ವಿ.ಎ , 110/11 ಕೆ.ವಿ ವಿದ್ಯುತ್ ಉಪಕೇಂದ್ರ ಭೂಮಿಪೂಜೆ ಕಾರ್ಯಕ್ರಮಕ್ಕೆ ಶನಿವಾರದಂದು ಶಾಸಕ ರಮೇಶ ಜಾರಕಿಹೊಳಿ ಅವರು ಚಾಲನೆ ನೀಡಿದರು .
ಕಳೆದ ಹಲವು ವರ್ಷಗಳಿಂದ ನಂದಗಾವ , ಶಿವಾಪುರ ಗ್ರಾಮದ ರೈತರಿಗೆ ಸರಿಯಾದ ವಿದ್ಯುತ್ ಸರಬಾರಜು ಆಗದೆ ಸಮಸ್ಯೆ ಎದುರಾಗಿತ್ತು , ಶಾಸಕ ರಮೇಶ ಜಾರಕಿಹೊಳಿ ಅವರ ಸತತ ಪ್ರಯತ್ನದಿಂದ ನಂದಗಾಂವ ಗ್ರಾಮಕ್ಕೆ ಅವಶ್ಯವಿದ್ದ ವಿದ್ಯುತ್ ಉಪ ಕೆಂದ್ರ ಕಾಮಗಾರಿ ಚಾಲನೆಯಿಂದ ಗ್ರಾಮಸ್ಥರು ಹರ್ಷವ್ಯಕ್ತಪಡಿಸಿದರು .
ಈ ಸಂದರ್ಭದಲ್ಲಿ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ , ಕರ್ನಾಟಕ ವಿದ್ಯುತ್ ಪ್ರಸರಣ ನಿ , ಅಧೀಕ್ಷಕ ಇಂಜನೀಯರ್ ಶ್ರೀಕಾಂತ ಸಸಾಲಟ್ಟಿ , ಹೆಸ್ಕಾಂ ಅಧಿಕಾರಿಗಳಾದ ಎನ್ ವಿ ಮೂಡಲಗಿ , ಎಮ್ ಎಸ್ ನಾಗನ್ನವರ , ಎಸ್ ಪಿ ವರಾಳೆ ಸೇರಿದಂತೆ ಓಂ ಅಸೋಸಿಯೇಟ್ ಗುತ್ತಿಗೆದಾರರು ಇದ್ದರು .