ಘಟಪ್ರಭಾ: ಯುವಕರು ದೇಶದ ರಕ್ಷಣೆ ಮಾಡುವ ಸೇನೆ ಹಾಗೂ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸದರೆ ಅದು, ಸಮಾಜ ಸೇವೆಗೆ ಸಮ. ಹೆಚ್ಚೆಚು ಯುವಕರು ಉದ್ಯೋಗ ಪಡೆದು ಜೀವನ ರೂಪಿಸಿಕೊಂಡರೆ ಸತೀಶ ಜಾರಕಿಹೊಳಿ ಫೌಂಡೇಶನ್ ಗೆ ಹೆಮ್ಮೆ, ಗೌರವ ನೀಡಿದಂತಾಗುತ್ತದೆ ಎಂದು ಯುವ ನಾಯಕ ರಾಹುಲ ಜಾರಕಿಹೊಳಿ ಹೇಳಿದರು.
ಘಟಪ್ರಭಾದ ಸೇವಾದಳದಲ್ಲಿ ಆರಂಭವಾದ ಆಸಕ್ತ ಯುವಕರಿಗೆ ಹತ್ತು ದಿನಗಳ ಕಾಲ ಉಚಿತ ಸೇನಾ ಮತ್ತು ಪೊಲೀಸ್ ಕಾನ್ಟೇಬಲ್ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ತಾಯಿ ನಾಡಿಗೆ ಸೇವೆ ಸಲ್ಲಿಸುವುದು ಸಮಾಜ ಸೇವೆ ಸಲ್ಲಿಸುವುದಕ್ಕಿಂತ ಕೈ ಮೇಲು, ಸಿಕ್ಕ ಅವಕಾಶ ಬಳಿಸಿಕೊಂಡು ಯುವಜನರನ್ನು ಉತ್ತಮ ಮಾರ್ಗದಲ್ಲಿ ಸಾಗಿದರೆ ಅದೇ ಹೆಮ್ಮೆಯ ವಿಷಯ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅವರು ಸೇನೆ ಸೇರಿ ದೇಶಕ್ಕಾಗಿ ಸೇವೆ ಸಲ್ಲಿಸುವುದು ಹಾಗೂ ಪೋಲಿಸ್ ಇಲಾಖೆಗೆ ಸೇರುವುದು ನಮ್ಮ ಯುವಕರಿಗೆ ಹೆಮ್ಮೆಯ ವಿಷಯವಾಗಿದೆ ಅದಕ್ಕಾಗಿ ಅವರು ಸಾಕಷ್ಟು ಕಷ್ಟ ಪಡುತ್ತಿದ್ದಾರೆ. ಅವರ ಗುರಿ ಸಾಧನೆಗೆ ಸತೀಶ ಜಾರಕಿಹೊಳಿ ಫೌಂಡೇಶನ್ ಬೆನ್ನೆಲುಬಾಗಿ ಕೆಲಸ ಮಾಡಲಿದೆ ಇದರ ಸದುಪಯೋಗವನ್ನು ಎಲ್ಲ ಯುವಕರು ಪಡೆದುಕೊಳ್ಳುವಂತಾಗಬೇಕು, ಇಲ್ಲಿ ತರಬೇತಿ ಪಡೆದ ಪ್ರತಿಯೊಬ್ಬರಿಗೂ ಜೀವನದಲ್ಲಿ ಯಶಸ್ಸು ಸಿಗುವಂತಾಗಲಿ ಎಂದು ಹಾರೈಸಿದರು.
ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ ಪ್ರಾಸ್ತಾವಿಕವಾಗಿ ಮಾತನಾಡಿ, ಕೆ.ಎ.ಎಸ್/ ಐ.ಎ.ಎಸ್ ತರಬೇತಿ ನೀಡುವುದಕ್ಕಿಂತ ಸೇನೆ ಮತ್ತು ಪೊಲೀಸ್ ತರಬೇತಿ ನೀಡುವುದಕ್ಕೆ ಮಹತ್ವ ನೀಡಿರುವುದಕ್ಕೆ ಕಾರಣವಾಗಿದೆ. ಸಾಕಷ್ಟು ಬಡ ಯುವಕರಿಗೆ ಅನುಕೂಲವಾಗುತ್ತದೆ ಎಂದರು.
ಶಾಸಕ ಸತೀಶ ಜಾರಕಿಹೊಳಿಯವರ ಬಹಳ ದಿನಗಳ ಕನಸು ಈಡೇರಿದೆ. ಕಾರ್ಯಕ್ರಮದಲ್ಲಿ ಬೆಳಗಾವಿಯ ಟಾರ್ಗೆಟ್ ಕೋಚಿಂಗ್ ಸೆಂಟರ್ ನ ಪ್ರಕಾಶ ಮೇಟಿ, ದೈಹಿಕ ತರಬೇತುದಾರ ಸುಭಾಸ ನಾಯ್ಕ, ಶಿಕ್ಷಕರಾದ ಸಂತೋಷ ಮೆಳವಂಕಿ, ಹನಮಂತ ನಂದಿ,ಉಷಾ ನಾಯ್ಕ, ಸಮಾಜ ಸೇವಕ ಶಿವು ಪಾಟೀಲ ಹಾಗೂ ಇತರರು ಇದ್ದರು.