ಗೋಕಾಕ: ಸತ್ ಚಿಂತನೆಗಳನ್ನು ಬಳಸಿಕೊಂಡು ಹೃದಯವನ್ನು ಶುದ್ಧವಾಗಿಸಿ ಕೊಳ್ಳುವುದೆ ಸಂಸ್ಕಾರವಾಗಿದ್ದು, ಅದು ಪ್ರತಿಯೊಬ್ಬ ಭಾರತೀಯರಲ್ಲೂ ಇದೆ ಎಂದು ವಡೆಯರಟ್ಟಿ ಅಂಭಾ ದರ್ಶನ ಪೀಠದ ಶ್ರೀ ನಾರಾಯಣ ಶರಣರು ಹೇಳಿದರು.
ನಗರದ ಶೂನ್ಯ ಸಂಪಾದನ ಮಠದಲ್ಲಿ ಶ್ರೀ ಬಸವೇಶ್ವರ ಧರ್ಮ ಪ್ರಚಾರಕ ಸಂಸ್ಥೆ, ವಚನ ಸಾಹಿತ್ಯ ಚಿಂತನ ಮಂಥನ ವೇದಿಕೆ ಹಾಗೂ ಲಿಂಗಾಯತ ಮಹಿಳಾ ವೇದಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ಹುಣ್ಣಿಮೆ ನಿಮಿತ್ತ ಹಮ್ಮಿಕೊಂಡ 151 ನೇ ಶಿವಾನುಭವ ಗೋಷ್ಠಿಯಲ್ಲಿ ಪಾಲ್ಗೊಂಡು ಅವರು ಮತನಾಡುತ್ತಿದ್ದರು
ನಮ್ಮ ಸಂಸ್ಕೃತಿಯನ್ನು ಉಳಿಸಿ,ಬೆಳೆಸಿ ಮುಂದಿನ ಪೀಳಿಗೆಗೆ ನೀಡುವ ಜವಾಬ್ದಾರಿ ನಮ್ಮೇಲ್ಲರ ಮೇಲಿದೆ ಮನಗಳಿಗೆ ಸಂಸ್ಕಾರ ನೀಡಿದರೆ, ಮನವೇ ಮಹಾದೇವನ ಸ್ವರೂಪವಾಗುತ್ತದೆ. ಉತ್ತಮವಾದುದ್ದನ್ನು ನೀಡಿ , ಉತ್ತಮವಾಗುದುದ್ದನ್ನು ಪಡೆಯರಿ ಸರ್ವರಿಗೂ ಸರ್ವಕಾಲಕ್ಕೂ ದಾರಿ ದೀಪವಾದ ಶರಣರ ವಚನಗಳನ್ನು ತಮ್ಮ ಜೀವನದಲ್ಲಿ ಆಚರಣೆಗೆ ತರುವಂತೆ ಹೇಳಿದರು.
ಈ ಸಂದರ್ಭದಲ್ಲಿ ಬಸನಗೌಡ ಪಾಟೀಲ, ಸುಮಿತ್ರಾ ಗುರಾಣಿ , ಡಾ.ಸಿ.ಕೆ ನಾವಲಗಿ, ಶಿವಾಣಿ ಬಿದರಿ, ಅಶೋಕ ದಯನ್ನವರ , ಎಸ್.ಕೆ ಮಠದ ಇದ್ದರು.