ಘಟಪ್ರಭಾ ನಗರದ ನಿವಾಸಿ ಹಾಗೂ ದೆಹಲಿಯಲ್ಲಿ ಕೇಂದ್ರ ಸರ್ಕಾರದ ಸಂಸ್ಥೆಯಾದ ಸಿ.ಬಿ.ಐ ಇಲಾಖೆಯಲ್ಲಿ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ನಟರಾಜ ರಾಜಾಪೂರೆ ಇವರಿಗೆ ಇವರ ಸೇವೆಯನ್ನು ಗುರುತಿಸಿ ಕೇಂದ್ರ ಸರ್ಕಾರ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ಪ್ರಧಾನಿ ನರೇಂದ್ರ ಮೋದಿಯವರು ನೀಡಿ ಗೌರವಿಸಿದ್ದಾರೆ. ಈ ಅತ್ಯುನ್ನತ ಪ್ರಶಸ್ತಿಯನ್ನು ಪಡೆದುಕೊಂಡು ಇವರು ಮೊದಲ ಬಾರಿ ಘಟಪ್ರಭಾ ನಗರಕ್ಕೆ ಆಗಮಿಸಿದ ಇವರನ್ನು ರವಿವಾರ ರಂದು ನಗರದ ಮೃತ್ಯುಂಜಯ ಸಭಾ ಭವನದಲ್ಲಿ ಕನ್ನಡ ಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಸನ್ಮಾಸಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಸಾನಿಧ್ಯವನ್ನು ಘೋಡಗೆರಿಯ ಮಠದ ಪೂಜ್ಯರಾದ ಶಿವಾನಂದ ಸ್ವಾಮಿಗಳು, ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಕೆಂಪಣ್ಣ ಚೌಕಶಿ, ಕರ್ನಾಟಕ ರಕ್ಷಣಾ ವೇದಿಕೆ (ಸಂತೋಷ ಅರಳಿಕಟ್ಟಿ ಬಣ)ದ ರಾಜ್ಯಾಧ್ಯಕ್ಷ ಪ್ರಶಾಂತ ಅರಳಿಕಟ್ಟಿ,ಕನ್ನಡ ಸೇನೆ ಗೋಕಾಕ ತಾಲೂಕಾಧ್ಯಕ್ಷ ಅಪ್ಪಾಸಾಹೇಬ ಮುಲ್ಲಾ,ಸಮೃದ್ದಿ ವೇದಿಕೆ ರಾಜ್ಯ ಉಪಾಧ್ಯಕ್ಷ ಕೆ,ಕೆ ಪಟ್ಟಣಶೆಟ್ಟಿ,ಕನ್ನಡ ರಕ್ಷಣಾ ವೇದಿಕೆ ಗೋಕಾಕ ತಾಲೂಕಾಧ್ಯಕ್ಷ ಮಾರುತಿ ಚೌಕಶಿ, ತಮ್ಮಣ್ಣ ಅರಭಾಂವಿ, ಬಸವರಾಜ ಹುಬ್ಬಳ್ಳಿ,ಪಾಂಡು ಪೂಜೇರಿ,ಶಶಿ ಚೌಕಶಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.