ಬೆಳಗಾವಿ: ಬೆಳಗಾವಿ ನಗರದಲ್ಲಿ ಖಾಸಗಿ ಮಾರುಕಟ್ಟೆ ಸ್ಥಾಪನೆಯಾಗಲು ಪ್ರಧಾನಿ ನರೇಂದ್ರ ಮೋದಿ ಅವರೇ ಕಾರಣವೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಆರೋಪಿಸಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದಿಂದ ಜನ ಸಾಮಾನ್ಯರಿಗೆ ಸಾಕಷ್ಟು ತೊಂದರೆಯಾಗಿದೆ ಎಂದು ದೂರಿದರು.
ನಗರದಲ್ಲಿ ಪ್ರಾರಂಭವಾದ ಖಾಸಗಿ ಮಾರುಕಟ್ಟೆ ರೈತರನ್ನು ಶೋಷಣೆ ಮಾಡುತ್ತಿದ್ದು, ಕಾರಣ ಈ ಶೋಷಣೆ ತಪ್ಪಿಸಲು ಪರ್ಯಾಯವಾಗಿ ರೈತರ ಅನುಕೂಲಕ್ಕಾಗಿ ಎಲ್ಲಾ ಸೌಕರ್ಯಗಳೊಂದಿಗೆ ಹೊಸದಾಗಿ 12 ಎಕರೆ ವಿಶಾಲ ಜಾಗದಲ್ಲಿ ಹೊಸ ತರಕಾರಿ ಮಾರುಕಟ್ಟೆ ನಿರ್ಮಿಸಲು ನಿರ್ಧರಿಸಿದ್ದೇನೆ ಎಂದು ತಿಳಿಸಿದರು.
ಯಾವುದೇ ಸಂಘಟನೆ ಇರಲಿ ಶಾಲಾ ಹಂತದಲ್ಲಿ ಬರಬಾರದು. ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವ ನೆಪ ಇಟ್ಟುಕೊಂಡು ಕೆಲ ವಿದ್ಯಾರ್ಥಿಗಳು ಕೆಸರಿ ಶಾಲು ಧರಿಸಿ ಶಾಲೆ, ಕಾಲೇಜಿಗೆ ಬರುವುದು ತಪ್ಪು. ಇದನ್ನು ಸರ್ಕಾರ, ಶಿಕ್ಷಣ ಇಲಾಖೆ ಶೀಘ್ರ ಸರಿಪಡಿಸುವ ಕೆಲಸ ಮಾಡಬೇಕೆಂದರು.
ಗೋವಾದಲ್ಲಿ ಕಾಂಗ್ರೆಸ್ ಪರ ಅಲೆ ಇದೆ, ಆದರೆ ಕನ್ನಡಿಗರು ಎಲ್ಲರೂ ಕಾಂಗ್ರೆಸ್ ಪರ ಇಲ್ಲ. ಎಲ್ಲ ಪಕ್ಷದಲ್ಲಿಯೂ ಹಂಚಿ ಹೋಗಿದ್ದಾರೆ. ಈಗಾಗಲೇ ಪ್ರಚಾರ ಆರಂಭಿಸಿದ್ದು,ನಾನು ಕೂಡ ಇಪ್ಪತ್ತು ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಿದ್ದೇನೆ ಎಂದ ಅವರು ಗೋವಾದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಖಚಿತವೆಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕರು, ಮಾಜಿ ಸಚಿವ, ಶಾಸಕ ರಮೇಶ ಜಾರಕಿಹೊಳಿ ಅವರ ಮೇಲೆ ಎಸ್ಐಟಿ ಃ ಅಥವಾ ಂ ರಿಪೋಟ್ ಹಾಕಿದರೂ ಆ ವಿಷಯ ನಮಗೆ ಸಂಬಂಧವಿಲ್ಲ ಎಂದರು.
Check Also
ಗುರುವಾರದಿಂದ ಹಿಡಕಲ್ ಜಲಾಶಯದಿಂದ ಜಿ.ಆರ್.ಬಿ.ಸಿ/ ಜಿ.ಎಲ್.ಬಿ.ಸಿ/ ಸಿ.ಬಿ.ಸಿ ಕಾಲುವೆಗಳಿಗೆ 15 ದಿನಗಳವರೆಗೆ ನೀರು ಬಿಡುಗಡೆ
ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಸಮಸ್ತ ರೈತ ಬಾಂಧವರಿಂದ ಕೃತಜ್ಞತೆ ಸಲ್ಲಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಗೋಕಾಕ : ಹಿಡಕಲ್ …