ಗೋಕಾಕ :ಕರ್ನಾಟಕ ವಿಶ್ವನಿರ್ಮಾಣ ಸೇನೆ ಗೋಕಾಕ ತಾಲೂಕ ಘಟಕ ವತಿಯಿಂದ ಮೊನ್ನೆ ಗಣರಾಜ್ಯೋತ್ಸವ ಪರೇಡ್ ನಲ್ಲಿ ಕನ್ನಡದಲ್ಲಿ ಪಥಸಂಚಲನಕ್ಕೆ ನಿರ್ದೇಶನ ನೀಡಿದ ಗೋಕಾಕ ನಗರ ಠಾಣೆಯ ಪಿಎಸ್ ಆಯ್ ಖಾಜಪ್ಪಾ ವಾಲಿಕಾರ ಅವರನ್ನು ಕನ್ನಡ ಪ್ರೇಮ ಮೆರೆದ ಹಿನ್ನೆಲೆಯಲ್ಲಿ ಇವತ್ತು ಗೋಕಾಕ ನಗರ ಪೊಲೀಸ್ ಠಾಣೆಗೆ ಆಗಮಿಸಿ ಅವರನ್ನು ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಸನ್ಮಾನ ಮಾಡಿ ಮಾತನಾಡಿದ ಕರ್ನಾಟಕ ವಿಶ್ವನಿರ್ಮಾಣ ಸೇನೆ ಗೋಕಾಕ ತಾಲೂಕ ಅಧ್ಯಕ್ಷ ಶಶಿಕಾಂತ್ ಹೊಸಮನಿ ಕರ್ನಾಟಕ ಇತಿಹಾಸದಲ್ಲಿ ಒಬ್ಬ ಪೊಲೀಸ್ ಅಧಿಕಾರಿ ಕನ್ನಡ ಉಳಿಸಿ ಬೆಳೆಸುವ ಕಾರ್ಯಮಾಡಿದ್ದು ನಿಜವಾಗಿಯೂ ಶ್ಲಾಘನೀಯ ಇಂತಹ ಅಧಿಕಾರಿ ನಮ್ಮ ಗೋಕಾಕನಲ್ಲಿ ಇರುವುದು ನಮ್ಮೆಲ್ಲರರಿಗೂ ಹೆಮ್ಮೆಯ ವಿಷಯ ಎಂದರೂ ಈ ಸಂದರ್ಭದಲ್ಲಿ ಕರ್ನಾಟಕ ವಿಶ್ವನಿರ್ಮಾಣ ಸೇನೆ ಸಂಸ್ಥಾಪಕ ಅಧ್ಯಕ್ಷ ಡಾ.ಅಯೂಬ ಪೀರಜಾದೆ, ಬೆಳಗಾವಿ ಕಲಾವಿದರ ಘಟಕ ಜಿಲ್ಲಾಧ್ಯಕ್ಷ ಮಹಾಂತೇಶ್ ದಾಸಪ್ಪನವರ. ಶಿವು ಮಡಿವಾಳ, ರಫಿಕ್ ಖಾಜಿ,ಮಹೇಬುಬ ಪೀರಜಾದೆ, ಶಬ್ಬೀರ ಮುಜಾವರ,ಸೋಮನಾಥ್. ಜಂಗನವರ.ರಾಹುಲ್ ಖನಗಾರ.ಪರಶುರಾಮ. ಉದ್ದನಾಯ್ಕ್.ಆನಂದರಾಮ. ಎಚ್. ಕೆ. ಸೇರಿದಂತೆ ಹಲವಾರು ಪದಾಧಿಕಾರಿಗಳು ಉಪಸ್ಥಿತರಿದ್ದರು.