ಗೋಕಾಕ: ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲ್ಲೂಕು ಘಟಕದ ವತಿಯಿಂದ ಮೊನ್ನೆ ಗಣರಾಜ್ಯೋತ್ಸವ ಪೆರೇಡ್‍ನಲ್ಲಿ ಕನ್ನಡದಲ್ಲಿ ಪಥಸಂಚಲನಕ್ಕೆ ನಿರ್ದೇಶನ ನೀಡಿದ ಗೋಕಾಕ ನಗರ ಟಾಣೆಯ ಪಿಎಸ್ಐ ಕೆ ವಾಲಿಕಾರ ಅವರನ್ನುಕನ್ನಡ ಪ್ರೇಮ ಮೆರೆದ ಹಿನ್ನೆಲೆಯಲ್ಲಿ ಇವತ್ತು ಗೋಕಾಕ ನಗರ ಪೋಲಿಸ್ ಠಾಣೆಗೆ ಆಗಮಿಸಿ ಅವರನ್ನು ಸನ್ಮಾನ ಮಾಡಲಾಯಿತು.
ಈ ಸಂಧರ್ಭದಲ್ಲಿ ಸನ್ಮಾನ ಮಾಡಿ ಮಾತನಾಡಿದ ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆ ಸಂಚಾಲಕ ರೆಹಮಾನ್ ಮೊಕಾಶಿ ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಒಬ್ಬ ಸರ್ಕಾರಿ ನೌಕರರು ಕನ್ನಡ ಉಳಿಸಿ ಬೆಳೆಸುವ ಕಾರ್ಯಮಾಡಿದ್ದು ನಿಜವಾಗಿಯೂ ಶ್ಲಾಘನೀಯ ಇಂತಹ ಅಧಿಕಾರ ನಮ್ಮ ಗೋಕಾಕನಲ್ಲಿ ಇರುವುದು ನಮ್ಮ ಹೆಮ್ಮೆ ವಿಷಯ ಎಂದು ಹೇಳಿದರು.
ಈ ಸಂಧರ್ಭದಲ್ಲಿ ತಾಲ್ಲೂಕು ಅದ್ಯಕ್ಷ ಶೆಟ್ಟೆಪ್ಪಾ ಗಾಡಿವಡ್ಡರ ಈಶ್ವರ ಗುಡಜ ಮಹಿಳಾ ಅದ್ಯಕ್ಷೆ ಪರವೀಣ ಭೋಜಗಾರ ಸಂಜು ಗಾಡಿವಡ್ಡರ ಲಕ್ಷ್ಮೀ ಗಾಡಿವಡ್ಡರ ಸುನೀಲ್ ಬೆಳಮರಡಿ ಮುಸ್ತಾಕ ಪುಲ್ತಾಂಬೆ ಯುವರಾಜ ಮಾದಿಗರ ರಪೀಕ ಖಾಜಿ ಶಂಕರ್ ಗಾಡಿವಡ್ಡರ ಬಸವರಾಜ ಮಾಳೆದವರ ಹಮೀದ್ ಗುಡವಾಲೆ ಸೇರಿದಂತೆ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು