ಗೋಕಾಕ: ಶಾಸಕರಾದ ರಮೇಶ ಜಾರಕಿಹೊಳಿ ಅವರ ಆದೇಶದಂತೆ ಗೋಕಾಕ ನಗರದಲ್ಲಿರುವ ವೀರಶೈವ ಲಿಂಗಾಯತ ಸಮಾಜದ ರುದ್ರ ಭೂಮಿಯಲ್ಲಿ ಗೋಕಾಕ ನಗರಸಭೆ ವತಿಯಿಂದ ಸ್ವಚ್ಛತಾ ಕಾರ್ಯ ನಡೆಯಿತು.
ಕಳೆದ ಬಾರಿ ಅತೀಯಾದ ಮಳೆಯಿಂದ ಅಪಾರ ಪ್ರಮಾಣದಲ್ಲಿ ಪ್ರವಾಹ ಬಂದ ಹಿನ್ನೆಲೆಯಲ್ಲಿ ರುದ್ರ ಭೂಮಿಯಲ್ಲಿ ನೀರು ನಿಂತಿದ್ದರಿಂದ ಇಡೀ ರುದ್ರಭೂಮಿಯು ಹದಗೆಟ್ಟು ಅಪಾರ ಪ್ರಮಾಣದಲ್ಲಿ ಮುಳ್ಳಿನ ಕಂಟಿಯು ಬೆಳೆದು ಶವ ಸಂಸ್ಕಾರಕ್ಕೆ ತುಂಬಾ ತೊಂದರೆಯಾಗುತ್ತಿತ್ತು. ಕಾರಣ ಇಂದು ಶಾಸಕರಾದ ರಮೇಶ ಜಾರಕಿಹೊಳಿ ಅವರ ಆದೇಶದಂತೆ ನಗರಸಭೆ ವತಿಯಿಂದ ಸ್ವಚ್ಛತಾ ಕಾರ್ಯ ನಡೆಸಿ ಶವ ಸಂಸ್ಕಾರಕ್ಕೆ ಅನುಕೂಲವಾಗುವಂತೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಬಸವರಾಜ ದೇಶನೂರ, ವಿಶ್ವನಾಥ ಬಿಳ್ಳೂರ, ರವಿ ಕಲಬುರ್ಗಿ, ಮಲ್ಲಿಕಾರ್ಜುನ ವಂಟಮೂರಿಮಠ, ಧರೀಶ ಕಲಘಾಣ, ದೇವಾನಂದ ಕಂಬಾರ, ಸೋಮನಾಥ ಮಗದುಮ್ಮ, ಪ್ರಮೋದ ಕುರಬೇಟ, ವಿಶ್ವನಾಥ ಕುರಬೇಟ, ಇಮಾಮ ಜಮಾದರ, ನಾಗರಾಜ ದೇಸಾಯಿ ಹಾಗೂ ಅನೀಲ ಸಂಕಾಜಿ ಇದ್ದರು.*