ಪಣಜಿ: ಫೆ. 14 ರಂದು ಗೋವಾ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಗೋವಾದಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಪಣಜಿ ಕಾಂಗ್ರೆಸ್ ಕಚೇರಿಯಲ್ಲಿ ನಾಯಕರ ಜೊತೆ ಸಭೆ ನಡೆಸಿದ್ದಾರೆ.
ನಂತರ ಇಲ್ಲಿನ ಮಡಗಾವನ ಅಕಿಮ್ ಪ್ರದೇಶದ ಎಸ್ಸಿ,ಎಸ್ಟಿ ಮತ್ತು ಗೋಂಧಳಿ ಸಮಾಜ ಕನ್ನಡಿಗರ ಜತೆ ಸಭೆ ನಡೆಸಿ, ಗೋವಾದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಕನ್ನಡಿಗರಿಗೆ ಎಲ್ಲಾ ರೀತಿಯ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಗೋವಾದ ಕನ್ನಡಿಗ ಮುಖಂಡರ ಜೊತೆಯೂ ಮಾತುಕತೆ ನಡೆಸಿದ್ದು, ಸಿದ್ದಣ್ಣ ಮೇಟಿ ಸೇರಿ ಹಲವು ಕನ್ನಡಿಗ ಮುಖಂಡರು ಈ ಚರ್ಚೆಯಲ್ಲಿ ಭಾಗಿಯಾಗಿದ್ದರು. ಈ ಮೂಲಕ ಗೋವಾ ಕನ್ನಡಿಗರ ಮತ ಸೆಳೆಯಲು ಕಾರ್ಯತಂತ್ರ ರೂಪಿಸಿದ್ದಾರೆ.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಪಿ.ವಿ. ಮೋಹನ, ಪಂಚನಗೌಡ ದ್ಯಾಮನಗೌಡರ, ಮುಖಂಡರಾದ ರಾಮಾ ಈಂಗಳೆ, ಕೃಷ್ಣಾ ಗಾಯಕವಾಡ, ವಿಜಯ ಬೈಸೆ, ಶೇಖರ ಗನಾಚಾರಿ, ಕಲ್ಪನಾ ಜೋಶಿ ಇದ್ದರು.
CKNEWSKANNADA / BRASTACHARDARSHAN CK NEWS KANNADA