ಗೋಕಾಕ: ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಅವರು, ಇಲ್ಲಿನ ಹಿಲ್ ಗಾರ್ಡನ್ ಕಚೇರಿಯಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125 ನೇ ಜಯಂತಿಯನ್ನು ಆಚರಿಸಿದರು, ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಗೌರವ ಅರ್ಪಿಸಿದರು. ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ನೇತಾಜಿ ಅವರ ಭಾವಚಿತ್ರಕ್ಕೆ ಪುಷ್ಪ ಸಲ್ಲಿಸಿದರು.
ಈ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಮಾತನಾಡಿ, ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಪೋರ್ಟ್ ಬ್ಲೇರ್ ನಲ್ಲಿ ಪ್ರಥಮ ಬಾರಿಗೆ ತ್ರಿವರ್ಣಧ್ವಜಾರೋಹಣ ಮಾಡಿದ ಸವಿನೆನಪಿಗೆ 75 ವರ್ಷ ಸಂದಿದೆ.
ನೇತಾಜಿ ಸುಭಾಷ್ ಚಂದ್ರ ಬೋಸ್ ರನ್ನು ನಿರಂತರ ನೆನೆಯುವ ಕಾರ್ಯವಾಗಲಿ:
ಬ್ರಿಟಿಷರಿಂದ ದಾಸ್ಯದಿಂದ ಮುಕ್ತಗೊಂಡ ಭಾರತದ ಪ್ರಥಮ ಭೂ ಪ್ರದೇಶ ಎಂದು ಸ್ವಾತಂತ್ಯದ ಘೋಷಣೆ ಮಾಡಿದ್ದರು. ಡಿಸೆಂಬರ್ 30, 1943ರಂದು ಭಾರತೀಯ ರಾಷ್ಟ್ರೀಯ ಸೇನೆ ಹಾಗೂ ಭಾರತೀಯ ಹೆಮ್ಮೆಯಾಗಿದೆ. ಅವರ ದಿಟ್ಟ ನಡೆ, ಹೋರಾಟ ರಾಷ್ಟ್ರಕ್ಕಾಗಿ ಅನೇಕ ಉಪವಾಸ ಸತ್ಯಾಗ್ರಹ ಮಾಡಿದ ಸೇನಾನಿ ನೇತಾಜಿ ಅವರು, ಯುವಕರ ಪಾಲಿನ ಸ್ಪೂರ್ತಿ ಚಿಲುಮೆ ಸುಭಾಷ್ ಚಂದ್ರ ಬೋಸ್ , ಇಂದಿನ ಯುವಕರು ನೇತಾಜಿ ಮಾರ್ಗದಲ್ಲಿ ಸಾಗಬೇಕಿದೆ ಎಂದರು.
ಭಾರತದ ಪಾಲಿಗೆ ನೇತಾಜಿಯವರ ಅದಮ್ಯ ಚೇತನ. ಅವರ ನಿಸ್ವಾರ್ಥ ಸೇವೆಯನ್ನು ಗೌರವಿಸಲು ನಿರಂತರ ನೆನೆಯುವ ಕಾರ್ಯವಾಗಬೇಕಿದೆ. ಬೋಸ್ ಮಾಡಿರುವ ಸಾಧನೆಗಳನ್ನು ಸಾರುವುದರ ಜೊತೆ ಯುವಕರಲ್ಲಿ ಸ್ಪೂರ್ತಿ ತುಂಬುವ ಉದ್ದೇಶವಿದೆ. ದೇಶದ ಯುವಕರು ನಿಜವಾದ ಪಕ್ಷಪಾತದ ಬಗ್ಗೆ ಅರ್ಥಮಾಡಿಕೊಳ್ಳಬೇಕಾದರೆ ನೇತಾಜಿ ಸುಭಾಷ್ ಚಂದ್ರ ಬೋಸ್ ಬಗ್ಗೆ ತಿಳಿದುಕೊಳ್ಳಬೇಕು ಎಂದು ಹೇಳಿದರು.
ಇಲ್ಲಿನ ಹಿಲ್ ಗಾರ್ಡನ್ ಕಚೇರಿಯಲ್ಲಿ ಸಿಬ್ಬಂದಿ ಹಾಗೂ ಇತರರು ಇದ್ದರು.
CKNEWSKANNADA / BRASTACHARDARSHAN CK NEWS KANNADA