ಗೋಕಾಕ ಜ 20 : ಕನ್ನಡಿಗರ ಸ್ವಾಭಿಮಾನ ಕೆಣಕಿ ಬಂಧನಕ್ಕೋಳಗಾಗಿರುವ ನಾಡ ದ್ರೋಹಿ ಎಂಇಎಸ್ ಮುಖಂಡ ಬಿಡುಗಡೆಗೆ ಆಗ್ರಹಿಸಿ ಜೈಲು ಬಿಡುಗಡೆ ಚಳುವಳಿ ನೆಪದಲ್ಲಿ ಕರ್ನಾಟಕ ಗಡಿ ಪ್ರವೇಶ ಮಾಡುತ್ತೇವೆಂದು ಹೇಳಿಕೆ ನೀಡಿರುವ ವಿಜಯ ದೇವಣೆ ಹಾಗೂ ಶಿವಸೇನೆ ಕಾರ್ಯಕರ್ತರನ್ನು ಅಡ್ಡಾಡಿಸಿ ಹೊಡೆಯುತ್ತೇವೆ ಎಂದು ಕರವೇ ಮುಖಂಡ ಬಸವರಾಜ ಖಾನಪ್ಪನವರ ಗುಡುಗಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೊಲ್ಹಾಪುರ ಜಿಲ್ಲೆ ಶಿವಸೇನೆ ಪ್ರಮುಖ ವಿಜಯ ದೇವಣೆ ಕನ್ನಡಿಗರ ಸ್ವಾಭಿಮಾನ ದಕ್ಕೆ ತರುವ ಕಾರ್ಯಕ್ಕೆ ಇಳಿದಿರುವದು ತರವಲ್ಲ , ಯಾವುದೇ ಕಾರಣಕ್ಕೂ ನಾಡ ದ್ರೋಹಿಗಳನ್ನು ರಾಜ್ಯದ ಗಡಿ ಪ್ರವೇಶ ಮಾಡಲು ಬಿಡುವದಿಲ್ಲ ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡುಗನಟ್ಟಿ ನೇತೃತ್ವದಲ್ಲಿ ಕರವೇ ಕಾರ್ಯಕರ್ತರು ಆ ದಿನ ಗಡಿ ಕಾಯಲಿದ್ದು, ರಾಜ್ಯ ಪ್ರವೇಶಿಸುವ ಶಿವಸೇನೆ ಕಾರ್ಯಕರ್ತರನ್ನು ಅಡ್ಡಾಡಿಸಿ ಹೊಡೆಯಲಾಗುವದು ಎಂದು ಖಾನಪ್ಪನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.