ಯಮಕನಮರಡಿ: ಕ್ರೀಡೆಗಳಲ್ಲಿ ಪಾಲ್ಗೊಂಡಾಗ ಮಾನಸಿಕ ಒತ್ತಡಗಳು ಕಡಿಮೆಯಾಗುತ್ತವೆ. ಆದ್ದರಿಂದ ಯುವಕರು ಹೆಚ್ಚು ಕ್ರೀಡೆಗಳಲ್ಲಿ ಭಾಗವಹಿಸಬೇಕು ಎಂದು ಯುವ ನಾಯಕ ರಾಹುಲ್ ಜಾರಕಿಹೊಳಿ ಕರೆ ನೀಡಿದರು.
ಪಶ್ಚಾಪೂರ ಗ್ರಾಮದಲ್ಲಿ ರಾಹುಲ್ ಅಣ್ಣಾ ಜಾರಕಿಹೊಳಿ ಅಭಿಮಾನಿ ಬಳಗದಿಂದ ಹಮ್ಮಿಕೊಂಡಿದ್ದ ರಾಹುಲ್ ಅಣ್ಣಾ ಜಾರಕಿಹೊಳಿ ಟ್ರೋಪಿ ಹಾಪ್ ಪೀಚ್ ಪುಲ್ ಗ್ರೌಂಡ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಇಂದು ಸ್ವಾಮಿ ವಿವೇಕಾನಂದರ ಜಯಂತಿ ಇದ್ದು, ಯುವಕರು ವಿವೇಕಾನಂದರ ಆದರ್ಶ, ಚಿಂತನೆಗಳನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕು. ದೇಶದ ಸರ್ವತೋಮುಖ ಪ್ರಗತಿ ಯುವ ಜನರ ಕೈಯಲ್ಲಿದೆ ಎಂದರು.
ಕ್ರೀಡೆಗಳಲ್ಲಿ ಸೋಲು ಗೆಲುವು ಸಹಜವಾಗಿರುತ್ತವೆ. ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು. ಜೀವನದಲ್ಲಿ ಎದುರಾಗುವಂತಹ ಒತ್ತಡಗಳನ್ನು ನಿಭಾಯಿಸಲಿಕ್ಕೆ ಕ್ರೀಡೆಗಳಿಂದ ಸಾಧ್ಯವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಂಜುನಾಥ ಪಾಟೀಲ್, ವಿನಾಯಕ ಹೆಜ್ಜೆ, ಈರಪ್ಪಾ ಬಂಜಿರಾಮ್, ನಜೀರ ಮೋಮಿನ, ಅಬ್ದುಲ್ ಗಣಿ ದರ್ಗಾ, ಮಸ್ತಾನ್ ಮುಜಾವರ, ಅಲಂಖಾನ್ ದೇಶಾಯಿ, ಅಶೋಕ ಚೌಗಲೆ, ಲೋಹಿತ್ ಅಡಿಮನಿ, ವಿಕ್ರಮ ಕೊಡಜೋಗಿ, ಇರ್ಪಾನ್ ದೇಶಾಯಿ, ನಿಖಿಲ್ ಮಾಳಗಿ, ಸರ್ಪರಾಜ್ ಪೀರಜಾದೆ, ಮುಕ್ತುಮ ದೇಶಾಯಿ, ಶಂಕರ ದುಂಡಗಿ, ಅಮರ ಉಮನಾಬಾದಿಮ್, ವಿನೋದ ಉಮನಾಬಾದಿಮ್,ತಿರಂಗಾ ಧಾಬಾ, ಜಾವೀದ್ ದೇಶಾಯಿ ಸೇರಿದಂತೆ ಪಶ್ಚಪೂರ ಗ್ರಾಮದ ನಾಯಕರು, ಯುವಕರು ಉಪಸ್ಥಿತರಿದ್ದರು.
Check Also
ಶಿಗ್ಗಾವಿಯಲ್ಲಿ ಕಾಂಗ್ರೆಸ್ ಗೆದ್ದರು, ಮೈ ಮರೆಯದ ಸಂಘಟನೆಗಳು: ಹಳ್ಳಿಗಳಿಗೆ ತೆರಳಿ ಮತದಾರರಿಗೆ ಕೃತಜ್ಞತೆ
ಹಾವೇರಿ: ಶಿಗ್ಗಾವಿ-ಸವಣೂರು ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಕ್ಷಕ್ಕೂ ಅಧಿಕ ಮತಗಳನ್ನು ಪಡೆದು ಶಾಸಕರಾಗಿ ಆಯ್ಕೆಯಾಗಿದ್ದರೂ, ಸಂಘಟನೆಗಳು ಮಾತ್ರ ಮೈ …