ಗೋಕಾಕ : ರಮೇಶ ಜಾರಕಿಹೊಳಿ ಮತ್ತು ಅಂಭಿರಾವ ಪಾಟೀಲ ಅಭಿಮಾನಿಗಳ ಬಳಗದಿಂದ ಹೊರತರಲಾಗಿರುವ 2022ರ ನೂತನ ದಿನದರ್ಶಿಕೆಯನ್ನು ಶಾಸಕ ರಮೇಶ ಜಾರಕಿಹೊಳಿ ಬಿಡುಗಡೆಗೊಳಿಸಿದರು.
ಮಾಜಿ ಜಿಪಂ.ಸದಸ್ಯ ಟಿ ಆರ್ ಕಾಗಲ, ಮಡ್ಡೆಪ್ಪ ತೋಳಿನವರ, ಮಾಜಿ ಕೊಳವಿ ಗ್ರಾಪಂ ಅಧ್ಯಕ್ಷ ಅಶೋಕ ಗೋಣಿ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ಓಬಿಸಿ ಮೋರ್ಚಾ ಅಧ್ಯಕ್ಷ ಲಕ್ಷ್ಮಣ ಖಡಕಭಾಂವಿ, ಮುಖಂಡರಾದ ದುರ್ಗಪ್ಪ ಶಾಸ್ತ್ರಿಗೊಲ್ಲರ, ಅಡಿವೇಶ ಮಜ್ಜಗಿ, ಮುತ್ತುರಾಜ ಜಮಖಂಡಿ, ಶಿವಲಿಂಗಯ್ಯ ಹಿರೇಮಠ, ಸತೀಶ ಮನ್ನಿಕೇರಿ ಸೇರಿದಂತೆ ಅನೇಕರು ಇದ್ದರು.