ಗೋಕಾಕ: ಗೋಕಾಕ ತಾಲೂಕು ಪತ್ರಕರ್ತರ ಸಂಘ (ರಿ) ಸಮ್ಮುಖದಲ್ಲಿ “ನ್ಯೂ ಗೋಕಾಕ” ತಂಡದ ನೂತನ 2022 ರ ದಿನದರ್ಶಿಕೆಯನ್ನು ಬಿಡುಗಡೆಗೊಳಿಸಿದರು.
ನ್ಯೂ ಗೋಕಾಕ ತಂಡದಿಂದ ತಯಾರಿಸಿದ ದಿನದರ್ಶಿಕೆಯನ್ನು ಇಂದು ತಂಡದ ಸದಸ್ಯರು ಗೋಕಾಕ ತಾಲೂಕಿನ ಸುದ್ದಿಗಳನ್ನು ಬಿತ್ತರಿಸುವ ವರದಿಗಾರರ ಸಮ್ಮುಖದಲ್ಲಿ ನ್ಯೂ ಗೋಕಾಕ ನೂತನ ದಿನದರ್ಶಿಕೆ ಬಿಡುಗಡೆಗೊಳಿಸಿದರು.
ಈ ಸಮಯದಲ್ಲಿ ಸಂಘದ ಅಧ್ಯಕ್ಷರಾದ ಮನೋಹರ ಮೇಗೆರಿ ಅವರು ಮಾತನಾಡಿ “ನ್ಯೂ ಗೋಕಾಕ” ಪುಟ ಉತ್ತಮವಾದ ಕಾರ್ಯ ಮಾಡುತ್ತಿದೆ ನಾವು ಮತ್ತು ನಮ್ಮ ಪತ್ರಕರ್ತರ ಸಂಘ ಸದಾ ಈ ತಂಡಕ್ಕೆ ಬೆನ್ನೆಲುಬಾಗಿ ಇರುತ್ತೇವೆ ಹೀಗೆ ಸಮಾಜಮುಖಿ ಕಾರ್ಯಗಳನ್ನು ಮಾಡಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಗೋಕಾಕ ತಾಲೂಕು ಪತ್ರಕರ್ತರ ಸಂಘ ಸರ್ವ ಸದಸ್ಯರು ಹಾಗೂ ನ್ಯೂ ಗೋಕಾಕ ತಂಡದ ಸದಸ್ಯರಾದ ಅಕ್ಷಯ್ ಕುರಬೇಟ, ವಿನಾಯಕ ಬನ್ನಿಶೆಟ್ಟಿ, ಹರ್ಷವರ್ಧನ ಚಿಗಡೋಳಿ ಹಾಗೂ ಅನೇಕರು ಉಪಸ್ಥಿತರಿದ್ದರು.