ಗೋಕಾಕ: ನಗರದ ಹಿಲ್ ಗಾರ್ಡನ್ ಕಛೇರಿಯಲ್ಲಿ ಕೆಪಿಸಿಸಿ ಕಾರ್ಯಾಧಕ್ಷ ಸತೀಶ್ ಜಾರಕಿಹೊಳಿ ಅವರ ನೇತೃತ್ವದಲ್ಲಿ “ನ್ಯೂ ಗೋಕಾಕ” ತಂಡದ ನೂತನ 2022 ರ ದಿನದರ್ಶಿಕೆಯನ್ನು ಬಿಡುಗಡೆಗೊಳಿಸಲಾಯಿತು.
ನ್ಯೂ ಗೋಕಾಕ ತಂಡದಿಂದ ತಯಾರಿಸಿದ ದಿನದರ್ಶಿಕೆಯನ್ನು ಇಂದು ತಂಡದ ಸದಸ್ಯರು ಕೆಪಿಸಿಸಿ ಕಾರ್ಯಾಧಕ್ಷ ಸತೀಶ್ ಜಾರಕಿಹೊಳಿ ಹಾಗೂ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರನ್ನು ಭೇಟಿಯಾಗಿ ದಿನದರ್ಶಿಕೆ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ನ್ಯೂ ಗೋಕಾಕ ತಂಡದ ಸದಸ್ಯರಾದ ಅಕ್ಷಯ್ ಕುರಬೇಟ, ವಿನಾಯಕ ಬನ್ನಿಶೆಟ್ಟಿ, ಹರ್ಷವರ್ಧನ ಚಿಗಡೋಳಿ ಹಾಗೂ ಅನೇಕರು ಉಪಸ್ಥಿತರಿದ್ದರು.