ಬೆಳಗಾವಿ: ಆಹಾರ ಸಚಿವ ಉಮೇಶ ಕತ್ತಿ ಒಡೆತನದ ಸಕ್ಕರೆ ಕಾರ್ಖಾನೆಯಿಂದ ತ್ಯಾಜ್ಯ ನೀರು ಹಳ್ಳಕ್ಕೆ ಬಿಡುತ್ತಿರುವುದನ್ನು ಖಂಡಿಸಿ ಸುವರ್ಣ ಗಾರ್ಡನ್ ನಲ್ಲಿ ಪಾಮಲದಿನ್ನಿ ಗ್ರಾಮಸ್ಥರು ನಡೆಸುತ್ತಿರುವ ಪ್ರತಿಭಟನೆ ಸ್ಥಳಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಭೇಟಿ ನೀಡಿ, ಪ್ರತಿಭಟನಾಕಾರ ಸಮಸ್ಯೆ ಆಲಿಸಿದರು.
ಸಚಿವ ಕತ್ತಿ ಒಡೆತನದ ವಿಶ್ವರಾಜ ಶುಗರ್ಸ್ ಸಕ್ಕರೆ ಕಾರ್ಖಾನೆಯಿಂದ ತಾಜ್ಯ ಮಿಶ್ರಿತ ರಾಸಾಯನಿಕ ನೀರು ಬಿಡುತ್ತಿರುವ ಬಗ್ಗೆ ಈಗಾಗಲೇ ತಹಶೀಲ್ದಾರ್ ಸೇರಿದಂತೆ ಜಿಲ್ಲಾಧಿಕಾರಿಗಳ ವರೆಗೆ ದೂರು ನೀಡಿದ್ದರು ಯಾವುದೇ ಕ್ರಮ ಜರುಗಿಸಿಲ್ಲ. ಹಳ್ಳದಲ್ಲಿ ಜಾನುವಾರಗಳ ಮೈ ತೊಳೆದ ಹಿನ್ನಲೆ ಜಾನುವಾರುಗಳಿಗೆ ಚರ್ಮ ರೋಗ ಹಾಗೂ ಇನ್ನಿತರ ರೋಗಗಳು ಬರುತ್ತಿವೆ. ಈ ಕೂಡಲೇ ಸಕ್ಕರೆ ಕಾರ್ಖಾನೆ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಪ್ರತಿಭಟನಾಕಾರರು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿಶಾಸಕಿಯರಾದ ಲಕ್ಷ್ಮಿ ಹೆಬ್ಬಾಳಕರ್, ಅಂಜಲಿ ನಿಂಬಾಳಕರ್ ಸೇರಿದಂತೆ ಪ್ರತಿಭಟನಾಕಾರರಾದ ರಾಮಪ್ಪ ಡಬಾಜ, ಲಕ್ಕಪ್ಪ ರಾಜಾಪೂರ, ವಿಠ್ಠಲ ಮೆಳವಂಕಿ, ದೀಪಕ ಹಂಜಿ, ಭೀಮಶಿ ನಿಲಜಗಿ, ಕಲ್ಲಪ್ಪ ನಿರ್ವಾಣಿ ಇದ್ದರು.