ನಾಡ ದ್ರೋಹಿ ಎಂ.ಇ.ಎಸ್ ಸಂಘಟನೆಯನ್ನು ನಿಷೇದಿಸುವಂತೆ ಹಾಗೂ ಕೊಲ್ಹಾಪುರದಲ್ಲಿ ಕನ್ನಡ ದ್ವಜ ಸುಟ್ಟಂತಹ ನಾಡ ದ್ರೋಹಿಗಳ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಇಂದು ಘಟಪ್ರಭಾ ನಗರದಲ್ಲಿ ಕನ್ನಡ ಪರ ಸಂಘಟನೆಗಳ ಒಕ್ಕೂಟ ವತಿಯಿಂದ ಮೃತ್ಯುಂಜಯ ವೃತ್ತದಲ್ಲಿ ಟೈರಗೆ ಬೆಂಕಿ ಹಚ್ಚಿ ನಾಡ ದ್ರೋಹಿಗಳ ವಿರುದ್ದ ಆಕ್ರೋಶ ವ್ಯಕ್ತ ಪಡಿಸಲಾಯಿತು.
ಈ ಸಂದರ್ಭದಲ್ಲಿ ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಕೆಂಪಣ್ಣ ಚೌಕಾಶಿ, ಕರ್ನಾಟಕ ರಕ್ಷಣಾ ವೇದಿಕೆ ಸಂತೋಷ ಅರಳಿಕಟ್ಟಿ ಬಣ ದ ರಾಜ್ಯಾಧ್ಯಕ್ಷ ಪ್ರಶಾಂತ ಅರಳಿಕಟ್ಟಿ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಗೋಕಾಕ ತಾಲೂಕಾಧ್ಯಕ್ಷ ಸಂತೋಷ ಕಂಡ್ರಿ,ಕನ್ನಡ ಸೇನೆ ತಾಲೂಕಾಧ್ಯಕ್ಷ ಅಪ್ಪಾಸಾಹೇಬ ಮುಲ್ಲಾ, ಕನ್ನಡ ರಕ್ಷಣಾ ವೇದಿಕೆ ಗೋಕಾಕ ತಾಲೂಕಾಧ್ಯಕ್ಷ ಮಾರುತಿ ಚೌಕಾಶಿ,ಶ್ರೀಕಾಂತ ಮಹಾಜನ,ಸುರೇಶ ಚಿಗಡ್ಡೊಳಿ,ನಾರಾಯನ ಜಡಕೀನ ರಾಘವೇಂದ್ರ ನಾಯಿಕ ಶಿವಾನಂದ ಪಡದಾಳೆ .ಸಿದ್ದರಾಮ ಮುಪಗಾರ. ಭೀಮಶಿ ಬೆಳಗಲಿ. ಭೀಮಶಿ ಪೂಜೇರಿ. ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.
CKNEWSKANNADA / BRASTACHARDARSHAN CK NEWS KANNADA