ನವ ದೆಹಲಿ : ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆದ ಸ್ಕಿಲ್ ಬುಕ್ ಲೋಕಾರ್ಪಣೆ ಹಾಗೂ ಜ್ಞಾನ-ವಿಜ್ಞಾನ ಅಧ್ಯಾತ್ಮ ಮಹಾಸಮ್ಮೇಳನ ವತಿಯಿಂದ ದೇವ. ದೇಶ. ಮತ್ತು ಧರ್ಮದ ಕಾರ್ಯಕ್ಕಾಗಿ ರಾಷ್ಟ್ರೀಯ “ಧರ್ಮಾಚಾರ್ಯ” ಹಾಗೂ ” ಶ್ರೀ ಬಸವಗೋಪಾಲ ರತ್ನ”ಪ್ರಶಸ್ತಿಗೆ ಭಾಜನರಾದ ಭೂಮಿಯ ಮೇಲೆ ನಡೆದಾಡುವ ದೇವರು ದಾಸೋಹ ರತ್ನ ಚಕ್ರವರ್ತಿ ದಾನೇಶ್ವರ ಶ್ರೀಗಳು ಭಾಜನರಾಗಿದ್ದಾರೆ.
ನವ ದೆಹಲಿಯಲ್ಲಿ ಡಿಸೆಂಬರ್ 9ರಂದು ಜ್ಞಾನ-ವಿಜ್ಞಾನ -ಅಧ್ಯಾತ್ಮ ಮಹಾಸಮ್ಮೇಳನ ಕಾರ್ಯಕ್ರಮ ಈ ಕಾರ್ಯಕ್ರಮಕ್ಕೆ ನಮ್ಮ ಕರ್ನಾಟಕದ ಅಧ್ಯಾತ್ಮ ಲೋಕದ ಸೂರ್ಯ,ಭೂಮಿಯ ಮೇಲೆ ನಡೆದಾಡುವ ದೇವರು ಪರಿಪೂರ್ಣ ಪರಮಾತ್ಮ,ಕನ್ನಡದ ರತ್ನ,ಸರ್ವ ಧರ್ಮಗಳ ಸಮನ್ವಯ ಸಾಕಾರ ಮೂರ್ತಿ, ರಾಜ್ಯ -ಹೊರರಾಜ್ಯಗಳಿಗೆ ಅನ್ನ ನೀಡುವ ಭಗವಂತ, ದಿನ ದಲಿತರ ಬೆಳಕು, ಭಕ್ತವತ್ಸಲ್,ನಂಬಿದ ಭಕ್ತರನ್ನು ಒಡಲೋಳಿಟ್ಟು ಕಾಯುವ, ಕಲಿಯುಗದ ಅವತಾರಿ ಪುರುಷ,ಕಲಿಯುಗದ ಶ್ರೀ ಕೃಷ್ಣ ಪರಮಾತ್ಮ, ಎಂದು ಜನಪ್ರಿಯವಾಗಿರುವ ದಾಸೋಹ ರತ್ನ ಚಕ್ರವರ್ತಿ ಶ್ರೀ ದಾನೇಶ್ವರ ಶ್ರೀಗಳು ದೆಹಲಿಯಲ್ಲಿ ನಡೆದಂತಹ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಇವರು ಬಾಗಲಕೋಟ ಜಿಲ್ಲೆ ರಬಕವಿ -ಬನಹಟ್ಟಿ ತಾಲೂಕಿನ ಬಂಡಿಗಣಿಯಲ್ಲಿ. ದಾಸೋಹ ರತ್ನ ಚಕ್ರವರ್ತಿ ಶ್ರೀ ದಾನೇಶ್ವರ ಅಪ್ಪಾಜಿಯವರು ಸ್ವಂತ ದುಡಿದು 1970. ರಲ್ಲಿ ಶ್ರೀ ಬಸವಗೋಪಾಲ ನೀಲಮಾಣಿಕ ಮಠ ಸ್ಥಾಪಿಸಿ ಅಂದಿನಿಂದ ಜ್ಞಾನ ದಾಸೋಹ, ವಸ್ತ್ರ ದಾಸೋಹ, ವಿದ್ಯಾ ದಾಸೋಹ, ಅನ್ನ ದಾಸೋಹ ಸೇವೆಯನ್ನು ಯಾವ ಅಪೇಕ್ಷೆಯಿಲ್ಲದೆ ನಿಸ್ವಾರ್ಥ ಸೇವೆಯನ್ನು ನಿರಂತರ ಇಂದಿನವರೆಗೂ ಮುಂದುವರೆಸಿಕೊಂಡು ನಡೆದಿದ್ದಾರೆ.
ಇದನ್ನು ಮನಗಂಡು ಡಾ. ಕಿರಣ್ ಜರ್ಕರ್ ಸರ್ ರವರು ಆಮಂತ್ರಣ ನೀಡಿ ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು ಕರ್ನಾಟಕದಿಂದ ಈ ಕಾರ್ಯಕ್ರಮಕಕ್ಕೆ ದಾಸೋಹ ರತ್ನ ಚಕ್ರವರ್ತಿ ಶ್ರೀ ದಾನೇಶ್ವರ ಅಪ್ಪಾಜಿಯವರು ಭಾಗವಹಿಸಿದ್ದರು ಭಕ್ತ ಸಮೂಹಕ್ಕೂ ಮತ್ತು ಎಲ್ಲಾ ಕನ್ನಡಿಗರಿಗೆ ಸಂತಸವಾಗಿದೆ.