ಹಾವೇರಿ: ” ಪ್ರತಿವರ್ಷದಂತೆ ಈ ವರ್ಷವೂ ರಾಜನಹಳ್ಳಿ ವಾಲ್ಮೀಕಿ ಪೀಠದ ಜಾತ್ರಾಮಹೋತ್ಸವ ಪೆ. 8 ಮತ್ತು 9 ರಂದು ಎರಡು ದಿನಗಳ ಕಾಲ ಜರುಗಲಿದ್ದು, ಈ ಜಾತ್ರಾಮಹೋತ್ಸವನ್ನು ಸಮಾಜ ಬಾಂಧವರು ಒಗ್ಗಟ್ಟಿನಿಂದ ಯಶಸ್ವಿಗೊಳಿಸಬೇಕು” ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಅವರು ಹೇಳಿದರು.
ಹರಿಹರ ತಾಲೂಕಿನ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಬುಧವಾರ ನಡೆದ, ವಾಲ್ಮೀಕಿ ಪೀಠದ ನಾಲ್ಕನೇಯ ವರ್ಷದ ಜಾತ್ರಾಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ಸಮಾಜ ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಮತ್ತು ಸಂಸ್ಕೃತಿಕವಾಗಿ ಏಳಿಗೆ ಕಾಣಬೇಕಿದೆ ಎಂದರು.
” ಎರಡು ದಿನವರೆಗೆ ನಡೆಯುವ ಜಾತ್ರಾ ಮಹೋತ್ಸವದಲ್ಲಿ ವಿದ್ವಾಂಸರು , ಸಾಹಿತಿಗಳು, ಸಮಾಜ ಚಿಂತಕರು ಹಾಗೂ ಮಹಿಳಾ ಸಬಲೀಕರಣ ಗೋಷ್ಠಿ, ಯುವ ಸಮುದಾಯ , ಜಾಗೃತಿ ಗೋಷ್ಠಿ, ಸಮಾಜದ ಪ್ರಗತಿಗೆ ಪೂರಕವಾಗುವ ಅನೇಕ ಚಿಂತನೆಗಳು ಇಲ್ಲಿ ನಡೆಯಬೇಕೆಂದು” ಸಲಹೆ ನೀಡಿದರು.
ಮೊದಲನೇಯ ಪೀಠಾದಿಪತಿ ದಿ.ಪುಣ್ಯಾನಂದ ಪುರಿ ಸ್ವಾಮೀಜಿಯವರ ಕುಟುಂಬ ಕಷ್ಟದಲ್ಲಿದೆ. ಈ ಸಮುದಾಯದ ರಾಜನಹಳ್ಳಿ ವಾಲ್ಮೀಕಿ ಪೀಠದ ಪೀಠಾಧಿಪತಿ ಶ್ರೀ ಪ್ರಸನ್ನಾಂದ ಪುರಿ ಸ್ವಾಮೀಜಿ ಅವರು ದಿ.ಪುಣ್ಯಾನಂದ ಪುರಿ ಸ್ವಾಮೀಜಿಯವರ ಕುಟುಂಬಕ್ಕೆ ಎಲ್ಲಾ ರೀತಿಯ ಸಹಾಯ, ಸಹಕಾರ ನೀಡಿಬೇಕೆಂದು ಎಂದು ಮನವಿ ಮಾಡಿಕೊಂಡರು.
ರಾಜ್ಯದಲ್ಲಿ ಸಮುದಾಯವನ್ನು ಕಟ್ಟಲು ಸ್ವಾಮೀಜಿ ಬಹಳಷ್ಟು ಶ್ರಮಿಸಿದ್ದಾರೆ. ಹೀಗಾಗಿ ಈ ಸಮಾಜದ ಪೀಠದಿಂದ ಕುಟುಂಬಕ್ಕೆ ನಾವೆಲ್ಲರೂ ಬೆನ್ನುಲುಬಾಗಿ ನೀಲ್ಲಬೇಕಿದೆ ಎಂದು ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ, ಪೀಠದ ಮುಖಂಡರು ಸಮ್ಮತಿ ಸೂಚಿಸಿದರು.
ಈ ಸಂದರ್ಭದಲ್ಲಿ ರಾಜನಹಳ್ಳಿ ವಾಲ್ಮೀಕಿ ಪೀಠದ ಜಾತ್ರಾ ಮಹೊತ್ಸವದ ಅಧ್ಯಕ್ಷರಾಗಿ ಚಳ್ಳಿಕೇರಿ ಮತಕ್ಷೇತ್ರದ ಶಾಸಕ ಟಿ .ರಘುಮೂರ್ತಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಕೆ ಪಾಲಯ್ಯ, ರಾಜೇಂದ್ರ ಸಿಂಹ್ , ಪ್ರಕಾಶ ಹಾದಿಮನಿ, ರಮೇಶ ಹುಗ್ಗಿಗೇರಿ, ಜಭಣ್ಣ ನಾಯಕ, ೆ ಬಿ ರಾಮಚಂದ್ರಪ್ಪ ಸೇರಿದಂತೆ ಸಮಾಜದ ಮುಖಂಡರು ಹಾಗೂ ಇತರರು ಇದ್ದರು.