ಗೋಕಾಕ: ಮೇಲೆಲ್ಲ ಥಳಕು ಒಳಗಡೆ ಹುಳುಕು ಎಂಬ ಗಾದೆ ಮಾತು ಇದನ್ನ ನೋಡಿಯೆ ಹಿರಿಯರು ಮಾಡಿದ್ದಾರೆಂದು ಸಂಶಯ ವ್ಯಕ್ತವಾಗುತ್ತಲಿದೆ,
ಹೌದು ಗೋಕಾಕ ತಾಲೂಕಿನ ಕೊಣ್ಣೂರ ಪುರಸಭೆಯ ಕಚೇರಿಯಲ್ಲಿ ಇರುವ ಶೌಚಾಲಯವು ಒಡೆದು ಹೊಗಿದ್ದು,ಸ್ಚಚ್ಚತೆ ಇಲ್ಲದೆ ಮೂತ್ರದ ವಾಸನೆ ಗಬ್ಬು ನಾರುತ್ತಲಿದೆ,ವಿವಿದ ಕೆಲಸಕ್ಕಾಗಿ ಈ ಕಚೇರಿಗೆ ಬರುವ ಸಾರ್ವಜನಿಕರಿಗೆ ಈ ಗಬ್ಬು ವಾಸನೆಯ ಬಗ್ಗೆ ಹಲವಾರು ಬಾರಿ ಮೌಖಿವಾಗಿ ತಿಳಿಸಿದರು ಸಹ ಸಂಬಂದಪಟ್ಟ ಅಧಿಕಾರಿಗಳು ಇನ್ನವರೆಗೂ ಅತ್ತ ಕಡೆ ಗಮನ ಹರಿಸಿಲ್ಲ,
ನೋಡಲಿಕ್ಕೆ ಸುಂದರವಾದ ಸುಸಜ್ಜಿತ ಕಟ್ಟಡ ಹೊಂದಿ ಅದರೊಂದಿಗೆ ,23 ಸದಸ್ಯರನ್ನು ಹೊಂದಿದ ಗೋಕಾಕ ತಾಲೂಕಿನ ಕೊಣ್ಣೂರ ಪುರಸಭೆಯ ಕಚೇರಿಯಲ್ಲಿಯೆ ಸ್ವಚ್ಚತೆ ಮಾಡದೆ ಇರುವವರು ಇನ್ನು ವಾರ್ಡುಗಳಲ್ಲಿ ಯಾವ ರೀತಿ ಸ್ವಚ್ಚತೆ ಮಾಡುತ್ತಾರೆ ಎಂಬುದಕ್ಕೆ ಇದೆ ಸಾಕ್ಷಿ,,