ಗೋಕಾಕ: ತಾಲೂಕಿನ ಕೊಳವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೂಲಿಕಟ್ಟಿ ಗ್ರಾಮದ ಜನತಾ ಪ್ಲಾಟ್ ನಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ಬೆಳಗಾದರೆ ಅಲ್ಲಿಯ ಜನ ಅಧಿಕಾರಿಗಳನ್ನು ಹಾಗೂ ಜನಪ್ರತಿನಿಧಿಗಳನ್ನು ಶಪಿಸುವಂತಾಗಿದೆ .
ಚರಂಡಿಯ ನೀರು ಸರಿಯಾದ ಚರಂಡಿಯ ವ್ಯವಸ್ಥೆ ಇಲ್ಲದೆ ಎಲ್ಲೆಂದರಲ್ಲಿ ಹರಿದು ಕೊಳಕು ವಾಸನೆ ಹಾಗೂ ಮಾರಕ ರೋಗಗಳಿಂದ ಜನರು ತತ್ತರಿಸುತ್ತಿದ್ದಾರೆ. ದಿನ ಬೆಳಗಾದರೆ ಆಸ್ಪತ್ರೆಗೆ ಡೆಂಗ್ಯೂ ಹಾಗೂ ಮಲೆರಿಯಾದಂತ ರೋಗದಿಂದ ಬಳಲುತ್ತಿದ್ದ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ.ಸರಿಯಾದ ಕರೆಂಟ್ ವ್ಯವಸ್ಥೆ ಇಲ್ಲದೆ ಸಂಜೆ ಆಗುತ್ತಿದ್ದಂತೆ ವಯಸ್ಸಾದ ಹಿರಿಯರಿಗೆ ಹಾಗೂ ಸಣ್ಣ ಮಕ್ಕಳಿಗೆ ನಡೆದಾಡುವುದು ಶಾಲಾ ಮಕ್ಕಳಿಗೆ ಅಭ್ಯಾಸ ಮಾಡುವುದು ತುಂಬಾ ಕಷ್ಟವಾಗಿದೆ.
ಈ ರೀತಿಯ ಇರುವ ಕಷ್ಟಗಳನ್ನು ನಮ್ಮ ಗ್ರಾಮ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರತಿಕ್ರಿಯೆ ಇಲ್ಲ.ಜನಪ್ರತಿನಿಧಿಗಳಂತು ಇಕಡೆ ಹೊರಳಿಯು ನೋಡಿಲ್ಲ ದಯಮಾಡಿ ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇನ್ನಾದರೂ ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ನಿವಾಸಿಗಳ ಆಗ್ರಹವಾಗಿದೆ…