ಮೂಡಲಗಿ : ತಾಲೂಕಿನಲ್ಲಿ ನಾಗನೂರ ಗ್ರಾಮದ ಮನ್ನಿಕೇರಿ ಪೆಟ್ರೋಲಿಯಂ ಉತ್ಸವದಲ್ಲಿ ಯುವ ನಾಯಕ ರಾಹುಲ ಸತೀಶ ಜಾರಕಿಹೊಳಿ ಯವರು ಹೈಮಾಸ್ಟ್ ಟವರ್ ಉದ್ಘಾಟನೆ ಮಾಡಿದ್ದರು. ಅದೆ ಸಂದರ್ಭದಲ್ಲಿ ಮನ್ನಿಕೇರಿ ಪೆಟ್ರೋಲಿಯಂ ಉತ್ಸವದ ಧಮಾಕಾ ಬಹುಮಾನ ವಿತರಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಘಟಪ್ರಭಾ ಜೆ ಜಿ ಕೋ ಹಾಸ್ಪಿಟಲ್ ನಿರ್ದೇಶಕ ಬಸಗೌಡ ಪಾಟೀಲ, ಮಲ್ಲಿಕಾರ್ಜುನ ಕಬ್ಬೂರ, ಪಾಂಡು ಮನ್ನಿಕೇರಿ, ರೆಪ್ಪ ಮರಪ್ಪಗೋಳ , ಅಡಿವೆಪ್ಪ ಹಾದಿಮನಿ, ವಡೆರಹಟ್ಟಿ ಗ್ರಾಮ ಪಂಚಾಯತ ಅಧ್ಯಕ್ಷ ಪರಸಪ್ಪ ಸಾರಪುರ, ದಿ ಘಟಪ್ರಭಾ ಶುಗರ್ ನಿರ್ದೇಶಕ ಚಂದ್ರಕಾಂತ ಮೋಟೆಪ್ಪಗೋಳ, ಮುರಳಿ ಬಡಿಗೇರ,ದಳವಾಯಿ, ಎಸ್ ಬಿ ಕುಳಗೂಡ, ಚಂದ್ರು ಬೆಳಗಲಿ, ನಾಗಪ್ಪ ಪಾಟೀಲ ಉಪಸ್ಥಿತರಿದ್ದರು.