ಬೆಳಗಾವಿ : ‘ ಗ್ರಾಹಕರಿಗೆ ವಿದ್ಯುತ್ ಸಮಸ್ಯೆ ಆಗಬಾರದು, ಸಮರ್ಪಕ ವಿದ್ಯುತ್ ಸರಬರಾಜು ಪೂರೈಕೆಗೆ ಅಧಿಕಾರಿಗಳು ಪ್ರಯತ್ನಿಸಬೇಕೆಂದು’ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸೂಚನೆ ನೀಡಿದರು.
ಯಮನಾಪುರ ಗ್ರಾಮದಲ್ಲಿ ಕೆಐಎಡಿಬಿ ಕೈಗಾರಿಕಾ ಪ್ರದೇಶವಾದ ಕಾಕತಿ-ಹೊನಗಾ ಗ್ರಾಮಕ್ಕೆ 24×7 ಗ್ರಾಹಕರ ವಿದ್ಯುತ್ ಸೇವಾ ಸಂಚಾರಿ ವಾಹನವನ್ನು ಬುಧವಾರ ಸಂಜೆ ಉದ್ಘಾಟಿಸಿ ಮಾತನಾಡಿದರು.
‘ ಗ್ರಾಹಕರಿಗೆ ಎಲ್ಲಿ ವಿದ್ಯುತ್ ಪೂರೈಕೆಯಲ್ಲಿ ತೊಂದರೆಯಾಗಲಿದೆ ಎಂಬುವುದನ್ನು ಚರ್ಚೆ ಮಾಡಿ, ತಕ್ಷಣ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸುವ ಮೂಲಕ ಸಮರ್ಪಕ ವಿದ್ಯುತ್ ಸರಬುರಾಜು ಮಾಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
‘ ವಿದ್ಯುತ್ ಸಂಚಾರಿ ವಾಹನದಿಂದ ಔದ್ಯೋಗಿಕ ಪ್ರದೇಶದ ಜನರಿಗೆ ಅನುಕೂಲವಾಗಲಿದೆ. ಜನರು ಸಹ ಇದರ ಪ್ರಯೋಜನ ಪಡೆಯಬೇಕು. ಇದರಿಂದ ದಿನದ 24 ಗಂಟೆಯೂ ಸಾರ್ವಜನಿಕರು ತಮ್ಮ ವಿದ್ಯುತ್ ಸಮಸ್ಯೆ ತಿಳಿಸಿದರೆ ತಕ್ಷಣ ಬಗೆ ಹರಿಯುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹೆಸ್ಕಾಂ ಇಲಾಖೆಯ ಇಇ ಅಪ್ಪನ್ನವರ, ಎಇಇ ವಿ.ಜಿ.ನಾಯಕ್, ಸಿದ್ದು ಸುಣಗಾರ, ಸುನೀಲ ಸುಣಗಾರ, ರಾಮಣ್ಣ ಗುಳ್ಳಿ, ಪಾಂಡು ಮನ್ನಿಕೇರಿ, ಸುರೇಶ್ ನಾಯಿಕ್, ಕಾಕತಿ ಸಿಪಿಐ ಸೇರಿದಂತೆ ಇತರರು ಇದ್ದರು.