ಬೆಳಗಾವಿ: ಕಳೆದ ವರ್ಷ ಆತ್ಮಹತ್ಯೆ ಮಾಡಿಕೊಂಡಿದ್ದ ಯಮಕನಮರಡಿ ಮತಕ್ಷೇತ್ರದ ದಾಜಬಾನಟ್ಟಿ ಗ್ರಾಮದ ನೇಕಾರ ಸಂಜು ರಾಮಪ್ಪ ಮಜತಿ ಅವರ ಕುಟುಂಬಸ್ಥರಿಗೆ ಶಾಸಕರಾದ ಸತೀಶ ಜಾರಕಿಹೊಳಿ ಅವರು ಇಂದು ಪರಿಹಾರ ಧನ ಚೆಕ್ ವಿತರಿಸಿದರು.
ನಗರದಲ್ಲಿರುವ ಶಾಸಕರ ಗೃಹಕಚೇರಿಯಲ್ಲಿ ಮೃತ ಸಂಜು ಮಜತಿ ಅವರ ಪತ್ನಿ ಸುರೇಖಾ ಮಜತಿ ಅವರಿಗೆ ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ಇಂದು 2 ಲಕ್ಷ ರೂ. ಚೆಕ್ ಹಸ್ತಾಂತರಿಸಲಾಯಿತು.
ನಂತರ ಮಾತನಾಡಿದ ಶಾಸಕರು, ಪರಿಹಾರ ಮೊತ್ತವನ್ನು ಮಕ್ಕಳ ಶಿಕ್ಷಣ ಹಾಗೂ ಜೀವನದ ನಿರ್ವಹಣೆಗಾಗಿ ಸದುಪಯೋಗ ಪಡಿಸಿಕೊಳ್ಳುವಂತೆ ಕುಟುಂಬಸ್ಥರಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕ ವಾಸುದೇವ ದೊಡ್ಡಮನಿ, ಪ್ರವರ್ದನಾಧಿಕಾರಿ ಸತೀಶ ಕಾಪಸಿ ಸೇರಿ ಇನ್ನಿತರರು ಉಪಸ್ಥಿತರಿದ್ದರು.