ಗೋಕಾಕ: ನಗರದ ಲಕ್ಷ್ಮೀ ದೇವಸ್ಥಾನದಲ್ಲಿ ಡೋರ ಸಮಾಜದಿಂದ ಚರ್ಮಗಾರಿಕೆ ವೃತ್ತಿಯಲ್ಲಿ ತೋಡಗಿಸಿಕೊಂಡವರಿಗೆ ವೃತ್ತಿ ದೃಢೀಕರಣ ಪ್ರಮಾಣ ಪತ್ರವನ್ನು ವಿತರಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಅಖಿಲ ಕರ್ನಾಟಕ ಡೋರ ಸಮಾಜದ ವತಿಯಿಂದ ರಾಜ್ಯ ಅಧ್ಯಕ್ಷರಾದ ಸಂತೋಷ ಸವಣೂರ ಇವರ ನೇತೃತ್ವದಲ್ಲಿ ಸಮಾಜ ಸಂಘಟನೆಗಾಗಿ 3 ಜಿಲ್ಲೆ ಪ್ರವಾಸವನ್ನು ಹಮ್ಮಿಕೊಂಡಿದ್ದು ಅದೇ ರೀತಿಯಲ್ಲಿ ಇಂದು ಗೋಕಾಕ ತಾಲೂಕಿಗೆ ಆಗಮಿಸಿದರು.
ಡೋರ ಸಮಾಜದ ತಾಲೂಕು ಅಧ್ಯಕ್ಷರಾದ ಶ್ರೀಮತಿ ತಾಯವ್ವ ಸೋನುನಿ ಇವರ ನೇತೃತ್ವದಲ್ಲಿ ಡಾ ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ (ಲಿಡ್ಕರ್) ವತಿಯಿಂದ ಚರ್ಮಗಾರಿಕೆ ವೃತ್ತಿಯಲ್ಲಿ ತೋಡಗಿಸಿಕೊಂಡ 30 ಜನರಿಗೆ ವೃತ್ತಿ ದೃಢೀಕರಣ ಪ್ರಮಾಣ ಪತ್ರವನ್ನು ವಿತರಿಸಿ, ನಿಗಮದ ವತಿಯಿಂದ ಟ್ರೇನಿಂಗ್ ಸೆಂಟರ್ ಮಂಜೂರು ಮಾಡಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಡೋರ ಸಮಾಜದ ಮುಖಂಡರು,ಹಿರಿಯರು ಹಾಗೂ ಯುವಕರು ಉಪಸ್ಥಿತರಿದ್ದರು.
CKNEWSKANNADA / BRASTACHARDARSHAN CK NEWS KANNADA