ಗೋಕಾಕ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ಪೌಂಡೇಶನ್ ವತಿಯಿಂದ ಇಲ್ಲಿನ ಬಸ್ ನಿಲ್ದಾಣದ ಆವರಣದಲ್ಲಿ ಸ್ವಚ್ಛತಾ ಅಭಿಮಾನ ಕಾರ್ಯಕ್ರಮವನ್ನು ಯುವ ನಾಯಕ ರಾಹುಲ್ ಜಾರಕಿಹೊಳಿ ಅವರ ಮಾರ್ಗದರ್ಶನದಂತೆ ಭಾನುವಾರ ನಡೆಸಲಾಯಿತು.
ಪ್ರತಿ ಭಾನುವಾರ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಗುವುದು, ಎರಡನೇ ವಾರ ಬಸ್ ನಿಲ್ದಾಣವನ್ನು ಆಯ್ಕೆ ಮಾಡಿ ಸ್ವಚ್ಛತೆಗೊಳ್ಳಿಸಲಾಗಿದೆ. ಪ್ರತಿದಿನ ಸಾವಿರಾರು ಪ್ರಯಾಣಿಕರು ಬೇರೆ ಬೇರೆ ಸ್ಥಳಗಳಿಗೆ ತೆರಳುವ ಬಸ್ ನಿಲ್ದಾಣ ಸ್ವಚ್ಛತೆ ಸಮಸ್ಯೆಯಿಂದ ಕೂಡಿತ್ತು. ಹಾಗಾಗಿ ಇಂದು ಬಸ್ ನಿಲ್ದಾಣದ ಸ್ವಚ್ಚತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮುಂದಿನ ವಾರವೂ ಶಾಲೆಗಳು ಹಾಗೂ ನಗರದಲ್ಲಿನ ಸಮಸ್ಯೆಗಳನ್ನು ಗುರುತಿಸಿ ಸ್ವಚ್ಛತೆ ಮಾಡಲಾಗುವುದು.
ನಂತರ ಬಸ್ ನಿಲ್ದಾಣದ ಮೇಲ್ವಿಚಾರಕರಿಗೆ ಇನ್ನೂ ಮುಂದೆ ಸ್ವಚ್ಛತೆ ಕಾಪಾಡಿಕೊಳ್ಳಿ, ತಕ್ಷಣವೇ ನಿಲ್ದಾಣದ ಆವರಣದಲ್ಲಿ ಸಿ.ಸಿ.ಕ್ಯಾಮರಾ ಅಳವಡಿಸಿ, ಕಿಡಿಗೇಡಿಗಳ ಉಪಟಳ ತಪ್ಪಿಸಬೇಕು. ಗುಟಕಾ ತಿಂದು ಉಗುಳಿದವರ ವಿರುದ್ದ ದಂಡ ಪಾವತಿಸಿ, ಸೂಕ್ತ ಕ್ರಮಕೊಳ್ಳಬೇಕು. ಶೌಚಾಲಯಗಳಲ್ಲಿ ಅಸ್ವಚ್ಛತೆ ತಾಂಡವಾಡುತ್ತಿವೆ. ಇವುಗಳ ಸ್ವಚ್ಛತೆಗಾಗಿ ಸಿಬ್ಬಂದಿ ನೇಮಕ ಮಾಡಿ, ಸಾರ್ವಜನಿಕರಿಗೆ ಕುಡಿಯುವ ನೀರು ವ್ಯವಸ್ಥೆ ಕಲ್ಪಿಸಬೇಕೆಂದು ಮನವಿ ಮಾಡಿದರು.
ಈ ಮಹತ್ವದ ಕಾರ್ಯಕ್ಕೆ ನೂರಾರು ಯುವಕರು ಸ್ವಚ್ಛತೆ ಮಾಡಿ, ಸ್ವಯಂ ಪ್ರೇರಿತರಾಗಿ ತಮ್ಮ ತಾವು ತೋಡಗಿಸಿಕೊಂಡಿದ್ದಾರೆ.ಈ ಕಾರ್ಯಕ್ಕೆ ನಗರದ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದೆ.