Breaking News

ಆನಂದ ಚೋಪ್ರಾ ಪ್ರಥಮ ಪುಣ್ಯಸ್ಮರಣೆ; ಶಾಸಕ ರಮೇಶ ಜಾರಕಿಹೊಳಿ, ಯುವ ನಾಯಕ ರಾಹುಲ್ ಜಾರಕಿಹೊಳಿ ಭಾಗಿ


ಸವದತ್ತಿ: ಉದ್ಯಮಿ ಹಾಗೂ ರಾಜಕೀಯ ದುರೀಣರಾಗಿದ್ದ ದಿ.ಆನಂದ ಚೋಪ್ರಾ ಅವರ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮ ಇಲ್ಲಿನ ಎಪಿಎಮ್‍ಸಿ ಆವರಣದಲ್ಲಿ ರವಿವಾರ ಜರುಗಿತು.

ಮಾಜಿ ಸಚಿವ ಹಾಗೂ ಶಾಸಕ ರಮೇಶ ಜಾರಕಿಹೊಳಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಆನಂದ ಚೋಪ್ರಾ ಭಾವಚಿತ್ರಕ್ಕೆ  ಪುಷ್ಪಾರ್ಚನೆ ಮಾಡಿದರು. ಕಾಂಗ್ರೆಸ್ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು.

ಪುಣ್ಯಸ್ಮರಣೆ ಅಂಗವಾಗಿ ಕೊರೊನಾ ವಾರಿಯರ್ಸ ಗಳಾಗಿ ಸೇವೆ ಸಲ್ಲಿಸಿದ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಪತ್ರಕರ್ತರು ಹಾಗೂ ಪೌರ ಕಾರ್ಮಿಕರನ್ನು ರಮೇಶ ಜಾರಕಿಹೊಳಿ ಮತ್ತು ರಾಹುಲ್ ಜಾರಕಿಹೊಳಿ ಅವರು ಸನ್ಮಾನಿಸಿ, ಆಹಾರ ಕಿಟ್ ಗಳನ್ನು ವಿತರಿಸಿದರು.

 

ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಚಿಕ್ಕುಂಬಿಯ ಅಜಾತ ನಾಗಲಿಂಗ ಸ್ವಾಮೀಜಿ, ಆನಂದ ಚೋಪ್ರಾ ಅವರು ಸಮಾಜ ಸೇವಕನಾಗಿ ಸಮಾಜದ ಒಳಿತಿಗಾಗಿ ಅನೇಕ ಕಾರ್ಯಗಳನ್ನು ಮಾಡಿದ್ದರು.  ಬಡಜನರ ಉದ್ಧಾರಕ್ಕಾಗಿ ಶ್ರಮಿಸಿದ್ದರು. ಅವರು ನಿಧನರಾಗಿ ಒಂದು ವರ್ಷವಾದರೂ ಅವರ ಆಚಾರ, ವಿಚಾರಗಳು ಇಂದಿಗೂ ಜೀವಂತವಾಗಿವೆ. ಅವರು ನಮ್ಮ ನಿಮ್ಮೆಲ್ಲರ ಮನದಲ್ಲಿ ಜೀವಂತವಾಗಿದ್ದಾರೆ ಎಂದು ಹೇಳಿದರು.

ಪುತ್ರ ಸೌರಭ ಆನಂದ ಚೋಪ್ರಾ ಮಾತನಾಡಿ, ಪ್ರತಿ ವರ್ಷ ತಂದೆಯ ಪುಣ್ಯಸ್ಮರಣೆ ಸಂದರ್ಭದಲ್ಲಿ ಸಮಾಜದಲ್ಲಿ ನೊಂದವರಿಗೆ ನೆರವಾಗುವ ಕಾರ್ಯಗಳನ್ನು ಚೋಪ್ರಾ ಕುಟುಂಬದಿಂದ ಮಾಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಶರಣೆ ಅನ್ನಪೂರ್ಣಾ ಹಿರಲಿಂಗನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ವಿವೇಕರಾವ ಪಾಟೀಲ್, ಬೆಂಗಳೂರು ಬಸವ ಧರ್ಮಪೀಠದ ಕುಂಬಳಗೂಡಿನ ಚನ್ನಬಸವ ಸ್ವಾಮೀಜಿ, ರಬಕವಿ ಬ್ರಹ್ಮಾನಂದ ಆಶ್ರಮದ ಗುರುಸಿದ್ದೇಶ್ವರ ಸ್ವಾಮೀಜಿ,  ನಾಗನೂರು ಬಸವಾಶ್ರಮದ ಬಸವಗೀತಾ ಮಾತಾಜಿ, ಶರಣೆ ಬಾಗೀರಥಿಬಾಯಿ ಹಿರೇಮಠ, ಸತ್ತಿಗೇರಿಯ ಜನಾಬ ಮುಪ್ತಿ ಬಶೀರಸಾಬ ಕಾಸ್ಮಿ, ಉಮೇಶ ಬಾಳಿ, ಮಹೇಂದ್ರ ಶಿಂಘಿ, ಮಾಜಿ ಶಾಸಕ ಆರ್.ವಿ. ಪಾಟೀಲ, ರಾಮನಗೌಡಾ ತಿಪರಾಶಿ, ಸಂತೋಷ ಹಾದಿಮನಿ, ಸೌರಭ ಆನಂದ ಚೋಪ್ರಾ ಹಾಗೂ ಆನಂದ ಚೋಪ್ರಾ ಅಭಿಮಾನಿ ಬಳಗದ ಸದಸ್ಯರು, ಎನ್ ಕರೇಜ ಗ್ರೂಪ್‍ನ ಸದಸ್ಯರು, ದಿ.ಆನಂದ ಚೋಪ್ರಾರವರ ಪತ್ನಿ ಕಾಂತಾದೇವಿ ಹಾಗೂ ಕುಟುಂಬದ ಸದಸ್ಯರು ಪಾಲ್ಗೊಂಡಿದ್ದರು.

ವಕೀಲ ಎಂ.ಎಂ. ಹಿರಲಿಂಗನವರ ಸ್ವಾಗತಿಸಿದರು. ದೇವು ನಡಕಟ್ಟಿನ ಮತ್ತು ವಿಕ್ರಮ ದಾಸನಾಳ ನಿರೂಪಿಸಿದರು. ವಿಜಯ ಹಿರೇಮಠ ವಂದಿಸಿದರು.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

ಎರಡು ಗ್ಯಾಂಗ್ 9 ಜನ ಡಕಾಯಿತರನ್ನು ಬಂಧಿಸಿ; ಚಿನ್ನಾಭರಣ,ನಗದು ಹಣ, ವಾಹನಗಳ ವಶಕ್ಕೆ ಪಡೆದ ಗೋಕಾಕ ಪೋಲಿಸ್!

ಗೋಕಾಕ : ಗೋಕಾಕ ಶಹರ, ಅಂಕಲಗಿ ಮತ್ತು ಗೋಕಾಕ ಗ್ರಾಮೀಣ ಹಳ್ಳಿಗಳಲ್ಲಿ ದರೋಡೆ, ಸುಲಿಗೆ, ಮೋಟಾರ ಸೈಕಲ ಕಳ್ಳತನ, ಜಾನುವಾರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ