Breaking News

ಇಂದಿನ ಯುವಕರು ಸರ್ ಎಂ ವಿಶ್ವೇಶ್ವರಯ್ಯ ಅವರ ಹಾದಿಯಲ್ಲಿ ಸಾಗಿ: ಶಿವನಗೌಡ ಪಾಟೀಲ್


ಗೋಕಾಕ :ಸರ್​ ಎಂ.ವಿಶ್ವೇಶ್ವರಯ್ಯ ಅವರ ಜನ್ಮ ದಿನದ ಪ್ರಯುಕ್ತ 1968ರಿಂದ ಪ್ರತಿ ವರ್ಷ ಸೆಪ್ಟೆಂಬರ್​ 15ನೇ ತಾರೀಖನ್ನು ಭಾರತದಲ್ಲಿ ಇಂಜಿನಯರ್​ಗಳ ದಿನಾಚರಣೆ ಎಂದು ಆಚರಿಸಲಾಗುತ್ತಿದ್ದು, ಆ ಮೂಲಕ ವಿಶ್ವೇಶ್ವರಯ್ಯ ಅವರ ಜೀವನವನ್ನು, ಅವರು ಮಾಡಿದ ಸಾಧನೆಯನ್ನು ಸ್ಮರಿಸಿಕೊಳ್ಳುವ ಕೆಲಸ ಆಗುತ್ತಿದೆ. ನಗರದ ಲಕ್ಷ್ಮೀ ದೇವಸ್ಥಾನ ಹತ್ತಿರವಿರುವ ಸರ್ ಎಂ ವಿಶ್ವೇಶ್ವರಯ್ಯ ಅವರ ವೃತ್ತದಲ್ಲಿ ಸರ್ ಎಂ ವಿಶ್ವೇಶ್ವರಯ್ಯ ಅವರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.

ವಿಶ್ವೇಶ್ವರಯ್ಯ ಸೊಸೈಟಿಯ ಅಧ್ಯಕ್ಷರಾದ ಶಿವನಗೌಡ ಪಾಟೀಲ್ ಮಾತನಾಡಿ ವಿಶ್ವೇಶ್ವರಯ್ಯ ಅವರು ದಕ್ಷ ,ಪ್ರಾಮಾಣಿಕ ಇಂಜಿನಿಯರ್ ಆಗಿದ್ದು ಅವರಂತೆ ಇಂದಿನ ಯುವಕರು ಕೂಡಾ ಪ್ರಾಮಾಣಿಕವಾಗಿ ದುಡಿದು ನಾಡಿಗೆ ಕೀರ್ತಿ ತರಬೇಕು, ಸರ್​ ಎಂ.ವಿಶ್ವೇಶ್ವರಯ್ಯ ಅವರ ಜನ್ಮ ದಿನದ ಪ್ರಯುಕ್ತ 1968ರಿಂದ ಪ್ರತಿ ವರ್ಷ ಸೆಪ್ಟೆಂಬರ್​ 15ನೇ ತಾರೀಖನ್ನು ಭಾರತದಲ್ಲಿ ಇಂಜಿನಯರ್​ಗಳ ದಿನಾಚರಣೆ ಎಂದು ಆಚರಿಸಲಾಗುತ್ತಿದ್ದು, ಆ ಮೂಲಕ ವಿಶ್ವೇಶ್ವರಯ್ಯ ಅವರ ಜೀವನವನ್ನು, ಅವರು ಮಾಡಿದ ಸಾಧನೆಯನ್ನು ಸ್ಮರಿಸಿಕೊಳ್ಳುವ ಕೆಲಸ ಆಗುತ್ತಿದೆ.

ಸರ್​ ಎಂ ವಿಶ್ವೇಶರಯ್ಯ ಅವರನ್ನು ಇಂದಿಗೂ ಸ್ಮರಿಸಿಕೊಳ್ಳಲು ಕಾರಣ ಅವರು ಮಾಡಿದ ಕೆಲಸಗಳು. ಜಲಾಶಯ ನಿರ್ಮಾಣ, ತೂಗು ಸೇತುವೆ ನಿರ್ಮಾಣದಿಂದ ಹಿಡಿದು ಸಮಾಜಕ್ಕೆ ನೆರವಾಗುವಂತಹ ಅದೆಷ್ಟೋ ಉತ್ತಮ ಕಾರ್ಯಗಳನ್ನು ತಮ್ಮ ಜೀವಿತಾವಧಿಯಲ್ಲಿ ಮಾಡಿದ್ದಾರೆ. ನೀರಿನಿಂದ ವಿದ್ಯುತ್​ ಪಡೆಯುವುದು ಇಂದು ಭಾರತದಲ್ಲಿ ಸರ್ವೇ ಸಾಮಾನ್ಯವಾಗಿದ್ದು, ಜಲ ವಿದ್ಯುತ್​ ಶಕ್ತಿ ಯೋಜನೆಯ ಹಿಂದೆಯೂ ಇವರ ಪಾತ್ರವಿದೆ ಎನ್ನುವುದು ಗಮನಾರ್ಹ. ಕರ್ನಾಟಕದಲ್ಲಿ ಕೃಷ್ಣ ರಾಜ ಸಾಗರ ಜಲಾಶಯ (ಕೆಆರ್​ಎಸ್​ ಡ್ಯಾಂ) ನಿರ್ಮಿಸುವುದರಿಂದ ಹಿಡಿದು ಹೈದರಾಬಾದ್​ನಲ್ಲಿ ಪ್ರಾವಾಹ ತಡೆಗಟ್ಟುವಿಕೆ ಯೋಜನೆ ರೂಪಿಸುವ ತನಕ ಸರ್​ ಎಂ.ವಿಶ್ವೇಶ್ವರಯ್ಯ ಹೆಸರು ಮಾಡಿದ್ದಾರೆ.

ಸೆಪ್ಟೆಂಬರ್​ 15, 1861ರಲ್ಲಿ ಕರ್ನಾಟಕದ ಮುದ್ದೇನಹಳ್ಳಿ ಎಂಬ ಪುಟ್ಟ ಹಳ್ಳಿಯೊಂದರಲ್ಲಿ ಜನಿಸಿದ ಸರ್​ ಎಂ.ವಿಶ್ವೇಶ್ವರಯ್ಯ ಅವರನ್ನು ಇನ್​ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಂಸ್ಥೆಯು​ ಭಾರತದ ಆರ್ಥಿಕ ಯೋಜನೆಯ ರೂವಾರಿ ಎಂಬರ್ಥದಲ್ಲಿ ಕರೆದಿದೆ. ಆ ಕಾಲದಲ್ಲಿಯೇ ಪುಣೆಯ ಇಂಜಿನಿಯರಿಂಗ್​ ಕಾಲೇಜಿನಿಂದ ಪದವಿ ಪಡೆದ ವಿಶ್ವೇಶ್ವರಯ್ಯ ಅವರು ತಮ್ಮ ಆಸಕ್ತಿಯ ಕ್ಷೇತ್ರಗಳಾದ ನೀರಾವರಿ ಹಾಗೂ ಪ್ರವಾಹ ತಡೆ ಯೋಜನೆಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ವಿದ್ಯುತ್ ನಿಗಮದ ಎಇಇ ಎಸ್ ಪಿ ವರಾಳೆ, ನಿವೃತ್ತ ಇಇ ಬೆನ್ನಾಡಿ, ಶ್ರೀರಂಗ ನಾಯಕ ,ವೀರಣ್ಣಾ ಹುದ್ದಾರ, ಮಲ್ಲೇಶ ಖಾನಾಪುರ, ಬಸವರಾಜ ಶೇಖರಗೋಳ, ಕಲ್ಲಪ್ಪಾ ಕಿತ್ತೂರು, ರಾಜು ಹಡಗಿನಾಳ, ತಮ್ಮನ ಬೆಳಗಾಂವಕರ, ಅಲ್ತಾಪ,ಮೀರಾಖೋರ, ಮಹೇಶ್ ಹುಂಡೆಕಾರ, ಶೀತಲ ಹುಂಡೆಕಾರ ಹಾಗೂ ಅನೇಕ ಉಪಸ್ಥಿತರಿದ್ದರು.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

*ರೈತರು ಸಾಲಕ್ಕೆ ಹೆದರದೇ ಧೈರ್ಯವಾಗಿ ಜೀವನ ಸಾಗಿಸಿ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ : ಮಾನವ ಜನ್ಮ ಪವಿತ್ರವಾದದ್ದು. ಜೀವನವೆಂದ ಮೇಲೆ ಪ್ರತಿಯೊಬ್ಬರಿಗೂ ಕಷ್ಟಗಳು ಬಂದೇ ಬರುತ್ತವೆ. ಜೊತೆಗೆ ಸಾಲವೂ ಕೂಡ ಇದ್ದೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ