ಗೋಕಾಕ ನಗರದ ಸರಕಾರಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವೈದ್ಯರು ಹಾಗೂ ಸಿಬ್ಬಂದಿಗಳ ಮೇಲೆ ಅಸಭ್ಯ ವರ್ತನೆ ಹಾಗೂ ಹಲ್ಲೆ ಮಾಡಲು ಯತ್ನಿಸಿದ ಗೋಕಾಕ ಶಹರ್ ಪೋಲಿಸ್ ಠಾಣೆಯ ಪಿಎಸ್ಐ ಅಮ್ಮಿನಬಾವಿ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಕರ್ನಾಟಕ ರಾಜ್ಯ ಸರಕಾರಿ ವೈದ್ಯಾಧಿಕಾರಿಗಳ ಸಂಘ ಬೆಳಗಾವಿ ಜಿಲ್ಲಾ ಘಟಕದಿಂದ ಮನವಿ ಸಲ್ಲಿಸಿದರು.
ಗೋಕಾಕ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರ್ತವ್ಯ ನಿರತರಾದ ಡಾ.ವಿಶ್ವನಾಥ ಬೋವಿ ಹಾಗೂ ಸಿಬ್ಬಂದಿಗಳ
ಪಿಎಸ್ಐ ಅಮ್ಮಿನಬಾವಿ ಅವರು ದಿನಾಂಕ ಸೆ.7 ರಂದು ರಾತ್ರಿ 11:45 ಕ್ಕೆ ಪಾನಮತ್ತರಾಗಿ ಬಂದು ಅವಾಚ್ಯ ಶಬ್ದಗಳನ್ನು ಬಳಸಿ, ಬೈದು ಅಸಭ್ಯವಾಗಿ ವರ್ತಿಸಿ ಹಲ್ಲೆ ಪ್ರಯತ್ನ ಮಾಡಿರುತ್ತಾರೆ. ಇದರಿಂದ ವೈದ್ಯರು ಹಾಗೂ ಸಿಬ್ಬಂದಿಗಳು ಮಾನಸಿಕ ಸ್ಥೈರ್ಯ ಕುಂದಿದ್ದು, ರಾತ್ರಿ ಸಮಯದಲ್ಲಿ ಕರ್ತವ್ಯ ನಿರ್ವಹಿಸಲು ಭಯಭೀತರಾಗಿರುತ್ತಾರೆ.
ನಮ್ಮನ್ನು ಕಾಪಾಡುವವರೆ ಈ ರೀತಿ ವರ್ತನೆ ಮಾಡಿದರೆ ನಾವು ಯಾರ ಮುಂದೆ ಅಹವಾಲುಗಳನ್ನು ಹೇಳಿ ಕರ್ತವ್ಯ ನಿರ್ವಹಿಸಬೇಕೆಂದು ತಿಳಿಯದ ಸಂಕಷ್ಟದಲ್ಲಿದ್ದಾರೆ. ಈ ವ್ಯಕ್ತಿಯ ವಿರುದ್ಧ ಕಾನೂನು ರೀತಿ ಸೂಕ್ತ ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕೆಂದು ಮನವಿ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಹಾಗೂ ಡಿಎಚ್ಓ ಡಾ.ಮುನ್ಯಾಳ ,ಡಾ.ಡುಮ್ಮಗೋಳ ,ಡಾ.ಗುಡಾದ, ಡಾ.ಕಿಡವಸಣ್ಣನವರ, ಡಾ.ರವೀಂದ್ರ ಅಂಟಿನ, ಡಾ.ಕೋಣಿ, ಡಾ.ಬಾಗಲಕೋಟ,ಡಾ.ಶಾಂತಾ ಮತ್ತು ಇನ್ನಿತರ ಉಪಸ್ಥಿತರಿದ್ದರು.