ಗೋಕಾಕ : ಶಿಕಾರಿಪುರದಲ್ಲಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ತೆರವುಗೊಳಿಸಿರುವುದನ್ನು ಖಂಡಿಸಿ, ಮರು ಸ್ಥಾಪನೆ ಮಾಡುವಂತೆ ಒತ್ತಾಯಿಸಿ ಹಾಲುಮತ ಮಹಾಸಭಾ ವತಿಯಿಂದ ತಹಶೀಲ್ದಾರರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ರಾಜ್ಯ ಸರ್ಕಾರದ ಪ್ರತಿ ಇಲಾಖೆಯಲ್ಲಿ ರಾಯಣ್ಣ ಭಾವಚಿತ್ರ ಪೂಜಿಸಬೇಕೆಂದು ಆದೇಶ ನೀಡಿದೆ. ಸ್ವಾತಂತ್ರ್ಯ ದಿನ ಎಲ್ಲಾ ರಾಯಣ್ಣನ ಅಭಿಮಾನಿಗಳು ಹಾಗೂ ಸರ್ಕಾರಿ ಕಚೇರಿಗಳಲ್ಲಿ ರಾಯಣ್ಣ ಜಯಂತಿ ಆಚರಿಸಿವೆ. ಆದರೆ, ಶಿಕಾರಿಪುರಲ್ಲಿ ಅದೇ ದಿನ ರಾಯಣ್ಣನ ಮೂರ್ತಿ ತೆರವುಗೊಳಿಸಿ ಅಪಮಾನ ಮಾಡಿದ್ದಾರೆ. ಇದು ಸಮಾಜ ತಲೆ ತಗ್ಗಿಸುವ ಕೃತ್ಯವಾಗಿದೆ. ಸರ್ಕಾರ ಶೀಘ್ರವೇ ಕ್ರಮಗೊಳ್ಳಬೇಕೆಂದು ಆಗ್ರಹಿಸಿದರು.
ಮಾಜಿ ಸಿಎಂ ಬಿಎಸ್ ವೈ ಕ್ಷೇತ್ರದಲ್ಲಿ ಇಂತಹ ಅಮಾನೀಯ ಘಟನೆ ನಡೆದಿದೆ. ಆದರೂ, ಯಡಿಯೂರಪ್ಪನ್ನವರು ಕ್ರಮ ಕೈಗೊಂಡಿಲ್ಲ ಶೂರ ರಾಯಣ್ಣನ ಮೇಲೆ ಭಕ್ತಿ ಇದ್ದರೆ, ಕೀಡಿಗೇಡಿಗಳಿಗೆ ಸೂಕ್ತ ಶಿಕ್ಷೆ ನೀಡುವಂತೆ ಸೂಚನೆ ನೀಡಲಿ ಎಂದರು.
ಶಿಕಾರಿಪುರ ಸ್ವಾತಂತ್ರ್ಯ ಹೋರಾಟಕ್ಕೆ ಕಿಚ್ಚು ಹಚ್ಚಿರುವ ಭೂಮಿ, ಇಂತಹ ಭೂಮಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ ಮಾಡಲಾಗಿದೆ. ದೇಶಕ್ಕೆ ಸ್ವಾತಂತ್ರ್ಯ ದೊರೆತ ಬಳಿಕ ಕೇಂದ್ರ ಹಾಗೂ ರಾಜ್ಯ ಸರ್ಕಾರ ಗಳು, ಶೂರ ರಾಯಣ್ಣ ಬಗ್ಗೆ ಹೆಚ್ಚು ಪ್ರಚಾರ ಮಾಡಬೇಕಿತ್ತು. ಇಲ್ಲಿವರೆಗೂ ಆ ಬೆಳವಣಿಗೆ ಆಗಿಲ್ಲ ಎಂದು ಅಸಮಾದಾನ ಹೋರಹಾಕಿದರು. ದೇಶವ್ಯಾಪಿಯಲ್ಲಿರಾಯಣ್ಣನವರ ಮೂರ್ತಿಗಳನ್ನು ಸರ್ಕಾರಗಳೇ ಸ್ಥಾಪಿಸಬೇಕೆಂದು ಮನವಿಯಲ್ಲಿ ಕೇಳಿಕೊಂಡರು.
ತೆರವುಗೊಳಿಸಿರುವ ರಾಯಣ್ಣನವರ ಮೂರ್ತಿಯನ್ನು ಅದೇ ಸ್ಥಳದಲ್ಲಿ ಮರು ಸ್ಥಾಪನೆ ಮಾಡಿ, ಗೌರವ ಸಲ್ಲಿಸಲು ಮಾಜಿ ಮುಖ್ಯಮಂತ್ರಿ ಬಿಎಸ್ ವೈ ಹಾಗೂ ಸಂಸದರಾದ ಬಿ ವೈ.ರಾಘವೇಂದ್ರ ಅವರು ತಾಲ್ಲೂಕಾ ಆಡಳಿತಕ್ಕೆ ಮಾರ್ಗದರ್ಶನ ನೀಡಬೇಕಿದೆ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಶಿವಾನಂದ ಖಿಲಾರಿ, ವಿನಾಯಕ ಕಟ್ಟಿಕಾರ, ಲಕ್ಷ್ಮಣ ಅಲಕನೂರ, ವಿಜಯ ಜಂಬಗಿ, ಬೀರಪ್ಪ ಗುಡಗುಡಿ, ರಾಘವೇಂದ್ರ ಗುಡಗುಡಿ ಹಾಗೂ ಇತರರು ಇದ್ದರು.