ಗೋಕಾಕ: ದೇಶದ ಗಡಿ ಕಾಯುವ ಯೋಧರಿಂದ ನಾವುಗಳು ನಿಶ್ಚಿಂತೆಯಾಗಿ ಜೀವನ ನಡೆಸುತ್ತಿದ್ದೆವೆ. ಯೋಧರು ಈ ದೇಶದ ಸಂಪತ್ತು. ಅವರಲ್ಲಿರುವ ದೇಶಾಭಿಮಾನ ಭದ್ರತೆಗೆ ಸಾಕ್ಷಿಯಾಗಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಅವರು, ೭೫ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಹಮ್ಮಿಕೊಂಡ ದೇಶ ಕಾಯುವ ಯೋಧರ ಸನ್ಮಾನ ಕಾರ್ಯಕ್ರಮದಲ್ಲಿ ಯೋಧರಿಗೆ ಸ್ವಾಮಿ ವಿವೇಕಾನಂದರ ಪುಸ್ತಕವನ್ನು ನೀಡಿ, ಶಾಲು ಹೊದಿಸಿ ಸನ್ಮಾನಿಸಿ, ಮಾತನಾಡಿದದರು.
ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಮುಡಿಪಿಟ್ಟು ಹೋರಾಡುವ ಅವರ ತ್ಯಾಗ ಮನೊಭಾವ ಎಂದಿಗೂ ಮರೆಯಲಾಗದು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ಮಹಿಳಾ ಮೋರ್ಚಾ ಅಧ್ಯಕ್ಷೆ ರಾಜೇಶ್ವರಿ ಒಡೆಯರ, ಮಾಜಿ ಜಿಪಂ ಸದಸ್ಯ ಟಿ ಆರ್ ಕಾಗಲ, ಅಶೋಕ ಗೋಣಿ, ಒಬಿಸಿ ಮೋರ್ಚಾ ಅಧ್ಯಕ್ಷ ಲಕ್ಷ್ಮಣ ಖಡಕಭಾಂವಿ, ಯುವ ಮೋರ್ಚಾ ಅಧ್ಯಕ್ಷ ಮಂಜು ಪ್ರಭುನಟ್ಟಿ, ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಮಲ್ಲಕಜಾನ ತಳವಾರ, ಶ್ರೀರಂಗ ನಾಯಕ, ಶಕೀಲ ಧಾರವಾಡಕರ, ತವನರಾಜ ಬೆನ್ನಾಡಿ, ಮುತ್ತುರಾಜ ಜಮಖಂಡಿ ಸೇರಿದಂತೆ ಅನೇಕರು ಇದ್ದರು.