ಬೆಂಗಳೂರು: ಕರ್ನಾಟಕ ವಾಲ್ಮೀಕಿ ಯುವ ವೇದಿಕೆಗೆ ನೇಮಿಸಲಾದ ರಾಜ್ಯಮಟ್ಟದ ನೂತನ ಪದಾಧಿಕಾರಿಗಳಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಬೆಂಗಳೂರಿನಲ್ಲಿ ಇಂದು ಆದೇಶ ಪತ್ರಗಳನ್ನು ವಿತರಿಸಿದರು.
ನಂತರ ಮಾತನಾಡಿದ ಅವರು, ನೂತನ ಪದಾಧಿಕಾರಿಗಳು ಪಕ್ಷಾತೀತ ಹಾಗೂ ಜಾತ್ಯಾತೀತವಾಗಿ ಕಾರ್ಯ ನಿರ್ವಹಿಸಬೇಕು. ಸಂಘಟನೆಯ ಮೂಲಕ ಎಲ್ಲ ವರ್ಗದ ಜನರ ನೆರವಿಗೂ ಧಾವಿಸಬೇಕು ಎಂದು ಸಲಹೆ ನೀಡಿದರು. ಪದಾಧಿಕಾರಿಗಳಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಯುವ ವೇದಿಕೆಯ ಉಪಾಧ್ಯಕ್ಷರಾದ ಮಧು ಮದಕರೆ, ಕಾರ್ಯದರ್ಶಿ ಮಣಿಕಂಠ ನಾಯಕ, ಪದಾಧಿಕಾರಿಗಳಾದ ಶಿವು ಕನ್ನಮ್ಮನವರ, ರಕ್ಷಿತ್ ನಾಯಕ್, ಶೋಭಾ ವೇಣುಗೋಪಾಲ, ಮಂಡ್ಯ ಜೀವನ, ಮಧಕರಿ ರವಿ ಇದ್ದರು.
CKNEWSKANNADA / BRASTACHARDARSHAN CK NEWS KANNADA