ಯಮಕನಮರಡಿ: ಮತಕ್ಷೇತ್ರದ ಚಿಕ್ಕಲದಿನ್ನಿ, ಗುಟಗುದ್ದಿ ಹಾಗೂ ಶಾಬಾಂದರ್ ಗ್ರಾಮಗಳಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ 80 ಲಕ್ಷ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಕಾಂಗ್ರೆಸ್ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಇಂದು ಭೂಮಿಪೂಜೆ ನೆರವೇರಿಸಿದರು.
ನಂತರ ಇಸ್ಲಾಂಪುರ ಗ್ರಾಮದಲ್ಲಿ ಶಾಸಕ ಸತೀಶ ಜಾರಕಿಹೊಳಿ ಅವರ ಅನುದಾನದಡಿ ನೂತನವಾಗಿ ನಿರ್ಮಿಸಿದ ಮಸೀದಿ ಹಾಗೂ ಶಾಲಾ ಕೊಠಡಿಯನ್ನು ರಾಹುಲ್ ಉದ್ಘಾಟನೆ ಮಾಡಿದರು. ಸಮಾಜದ ಮುಖಂಡರಾದ ಮೌಲಾಸಾಬ ದೇಸಾಯಿ ಸೇರಿ ಇನ್ನಿತರರು ಹಾಜರಿದ್ದರು.
ಗ್ರಾಮದಲ್ಲಿ ರಾಹುಲ್ ಜಾರಕಿಹೊಳಿ ಅವರಿಗೆ ಅದ್ಧೂರಿ ಸ್ವಾಗತ ಕೋರಲಾಯಿತು. ಗ್ರಾಮದ ಯುವಕರು ವಾಧ್ಯಮೇಳಗಳು ಹಾಗೂ ವಿವಿಧ ವೇಷಭೂಷಣ ತೊಟ್ಟು ರಾಹುಲ್ ಅವರನ್ನು ಬರಮಾಡಿಕೊಂಡರು.
ಕಾರ್ಯಕ್ರಮದ ನಂತರ ರಾಹುಲ್ ಅವರು ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಸಂತ್ರಸ್ತರಿಗೆ ಸಾಂತ್ವನ ಹೇಳಿದರು.
ಜಿಪಂ ಮಾಜಿ ಸದಸ್ಯರಾದ ಫಕೀರವ್ವಾ ಹಂಚಿನಮನಿ, ಮಂಜುನಾಥ. ಪಾಟೀಲ, ತಾಪಂ ಮಾಜಿ ಸದಸ್ಯ ಯಲ್ಲಪ್ಪ ಬೆಡಸೂರಿ, ಮುಖಂಡರಾದ ಶಂಕರ ಡೊಂಬರಿ, ಶಾಹಾಬಂದರ, ಪಾಂಡು ಮನ್ನಿಕೇರಿ, ಮಾರುತಿ ಗುಟಗುದ್ದಿ, ಕೆಇಬಿ ನಿರ್ದೇಶಕ ಈರಪ್ಪಾ ಬಂಜೀರಾಮ, ಪಿಡಿಓ ರಮೇಶ್ ತೇಲಿ, ಗ್ರಾಪಂ ಅಧ್ಯಕ್ಷ ಮಕ್ತುಮಶಾಬ, ಸತ್ತಪ್ಪಾ ಬಾಲದಂಡಿ ಸೇರಿ ಇನ್ನಿತರರು ಇದ್ದರು.