ಚಿಕ್ಕಮಗಳೂರು: ಗ್ಯಾಂಗ್ ವಾರ್, ಹೆದ್ದಾರಿ ದರೋಡೆ ನಡೆಸಲು ಸಂಚು ರೂಪಿಸಿದ್ದ ಹೈಟೆಕ್ ದರೋಡೆಕೋರರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಮಂಡ್ಯದ ಶಿವಕುಮಾರ್, ಹಾಸನದ ಕುಮಾರಸ್ವಾಮಿ, ಜಾರ್ಖಂಡ್ ಮೂಲದ ಅಜಯ್ ಸಿಂಗ್, ಮೂಡಿಗೆರೆಯ ಶಿವಕುಮಾರ್ ಎಂದು ಗುರುತಿಸಲಾಗಿದೆ. ಇವರುಗಳನ್ನು ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ಬಂಧಿಸಲಾಗಿದೆ. ಇವರಿಂದ ಎರಡು ರಿವಾಲ್ವರ್, 30 ಬುಲೆಟ್ಸ್, ಡ್ರ್ಯಾಗನ್, ಬೈಕ್ ವಶಪಡಿಸಲಾಗಿದೆ.
ಉತ್ತರ ಪ್ರದೇಶದಿಂದ ರಿವಾಲ್ವರ್ ಖರೀದಿಸಿದ್ದ ಈ ಗ್ಯಾಂಗ್, ಜೂಜು ಅಡ್ಡೆಗಳನ್ನು ಟಾರ್ಗೆಟ್ ಮಾಡಿ ದರೋಡೆ ಮಾಡುತ್ತಿದ್ದರು.
ಜೂಜಾಟದ ಸ್ಥಳಕ್ಕೆ ಹೋಗಿ ಗಾಳಿಯಲ್ಲಿ ಫೈರ್ ಮಾಡಿ ಹಣ ದೋಚುತ್ತಿದ್ದರು.ಗ್ಯಾಂಗ್ ವಾರ್ ನಡೆಸಲು ಸಂಚು ಹಾಕಿತ್ತು. ಹಾಸನದ ಯಾಚನಹಳ್ಳಿ ಚೇತನ್ ಎಂಬಾತನ ಮೇಲೆ ತಂಡ ಗುಂಡು ಹಾರಿಸಿತ್ತು.
ದರೋಡೆ ಗ್ಯಾಂಗ್ ಬಂಧಿಸಿದ ಪೊಲೀಸರಿಗೆ ಡಿಜಿ ಐಜಿಪಿ ಪ್ರವೀಣ್ ಸೂದ್ ಅವರು ಒಂದು ಲಕ್ಷ ಬಹುಮಾನ ನೀಡಿದ್ದಾರೆ.
CKNEWSKANNADA / BRASTACHARDARSHAN CK NEWS KANNADA