ಚಿತ್ರದುರ್ಗ: ಜಿಲ್ಲೆಯ ಮುರುಘಾಮಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಿವಿಧ ಮಠಾಧೀಶರು ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪರ ಬ್ಯಾಟಿಂಗ್ ಬೀಸಿದ್ದಾರೆ. ಯಡಿಯೂರಪ್ಪ ಈ ನಾಡು ಕಂಡಂತಹ ಶ್ರೇಷ್ಠ ನಾಯಕ. ನಾಲ್ಕು ಭಾರಿ ಮುಖ್ಯಮಂತ್ರಿಯಾಗಿದ್ದಾರೆ. ಕೊರೊನಾ ಸಂದರ್ಭದಲ್ಲಿ ಉತ್ಸಾಹಭರಿತವಾಗಿ ಕೆಲಸ ಮಾಡಿದ್ದಾರೆ. ಕೊರೊನಾ ಕಾಲದ ಸಂಕಷ್ಟವನ್ನ ನಿಭಾಸಿದ್ದಾರೆ. ಕೇಂದ್ರ ಸರ್ಕಾರ ಬಿಎಸ್ವೈ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ ಎಂದು ಮುರುಘಾ ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ.
ಬಿಎಸ್ವೈ ಜಾತಿಯಿಂದ ಲಿಂಗಾಯತರು. ಆದರೆ ಅವರು ಮಾಸ್ ಲೀಡರ್. ಅವರು ಯಾವುದೇ ಒಂದು ಜಾತಿಗೆ ಸೀಮಿತವಾಗಿಲ್ಲ. ಯಡಿಯೂರಪ್ಪ ಎಲ್ಲಾ ವರ್ಗದ ಜನರ ವಿಶ್ವಾಸ ಗಳಿಸದವರು. ಕಾಂಗ್ರೆಸ್ ನಾಯಕರು ಸಹ ಬಿಎಸ್ವೈಗೆ ಧೈರ್ಯ ತುಂಬಿತಿದ್ದಾರೆ ಎಂದು ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾದಾರ ಮಠದ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು, ಬೋವಿ ಮಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಕುಂಚಿಟಿಗ ಮಠದ ಶಾಂತವೀರ ಮಹಾಸ್ವಾಮೀಜಿ, ಶಿರಸಿ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಅಥಣಿ ಮಠದ ಶಿವಬಸವ ಶ್ರೀಗಳು ಸೇರಿ ವಿವಿಧ ಮಠಾಧೀಶರು ಭಾಗಿಯಾಗಿದ್ದರು.
ಯಡಿಯೂರಪ್ಪಗೆ ನಾವು ಸಂಪೂರ್ಣ ಬೆಂಬಲ ಕೊಡುತ್ತಿದ್ದೇವೆ. ಸಂಪೂರ್ಣವಾಗಿ ಈ ಅವಧಿಯನ್ನ ಮುಖ್ಯಮಂತ್ರಿಗಳು ಪೂರ್ಣಗೊಳಿಸಲಿ. ಅವರು ಹಿಂದುಳಿದ ಮಠ, ಸಮುದಾಯ ಅಭಿವೃದ್ಧಿಗೆ ಎಲ್ಲಾ ಸಮುದಾಯ ಒಟ್ಟಾಗಿ ಕರೆದೊಯ್ಯುತ್ತಿದ್ದಾರೆ. ಒಂದೇ ಜಾತಿಗೆ ಸೀಮಿತ ಕಾರ್ಯ ಮಾಡಿಲ್ಲ. ಹಿಂದುಳಿದ ಮಠ, ಅಭಿವೃದ್ದಿ ನಿಗಮ ಮುಖ್ಯವಾಹಿನಿಗೆ ತರುವ ಚಿಂತನೆ ನಡೆಸುತ್ತಿದ್ದಾರೆ. ಹೀಗಾಗಿ ಬಿಎಸ್ವೈ ಬೆನ್ನೆಲುಬಾಗಿ ಮಾತಾಡಬೇಕಾಗುತ್ತದೆ ಎಂದು ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.