Breaking News

ಜುಲೈ 30ರ ಬಳಿಕ‌ ಗಡ್ಡದ ಮಹಿಮೆ ರಾಜ್ಯಕ್ಕೆ ತಿಳಿಯಲಿದೆ ಬಸನಗೌಡ ಪಾಟೀಲ ಯತ್ನಾಳ ಅಚ್ಚರಿ ಹೇಳಿಕೆ.


ವಿಜಯಪುರ: ಮುಖ್ಯಮಂತ್ರಿ, ಸಚಿವರ ಬದಲಾವಣೆ ಕುರಿತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿರುವ ಆಡಿಯೊ ಲೀಕ್ ಪ್ರಕರಣ ಕುರಿತು ತನಿಖೆಯಾಗಬೇಕು ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಒತ್ತಾಯಿಸಿದ್ದಾರೆ.

ನಗರದಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರಿಗೆ ಆಪ್ತರಾಗಿರುವವರು ಸಿಸಿಬಿಯಲ್ಲಿದ್ದಾರೆ. ಹೀಗಾಗಿ ಎಲ್ಲವೂ ಸೋರಿಕೆಯಾಗುತ್ತಿದೆ ಎಂದು ಆರೋಪಿಸಿದರು.

ಖಾಸಗಿಯಾಗಿ ಮಾತನಾಡಿದ್ದನ್ನ ರೆಕಾರ್ಡ್ ಮಾಡಿಕೊಳ್ಳೊದು ಅಪರಾಧವಾಗುತ್ತದೆ. ವ್ಯಕ್ತಿಗತ ಗೌಪ್ಯತೆಗೆ ರಾಜ್ಯದಲ್ಲಿ ಅವಕಾಶವೇ ಇಲ್ಲದಂತಾಗಿದೆ. ರಾಜ್ಯದಲ್ಲಿ ಏನು ಬೇಕಾದದ್ದು ನಡೆಯುತ್ತಿದೆ. ಸಿಸಿಬಿಯವರು ಏನ್ ಮಾಡ್ತಿದ್ದಾರೆ?

ಎಂದು ಪ್ರಶ್ನಿಸಿದರು.

ರಾಜ್ಯ ಸರ್ಕಾರ ಡ್ರಗ್ಸ್ ಕೇಸ್, ಯುವರಾಜ್ ಕೇಸ್ ತನಿಖೆಯನ್ನು ಅರ್ಧಕ್ಕೆ ಬಿಟ್ಟದ್ದಾರೆ. ಸಿಸಿಬಿಯಲ್ಲಿರೋ ಹಿರಿಯ ಅಧಿಕಾರಿಗಳು ಈ ಬಗ್ಗೆ ಕಣ್ಣು ತೆರೆದು ನೋಡಬೇಕು ಎಂದರು.

ಗಡ್ಡದ ಮಹಿಮೆ:

‘ನನ್ನ ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಹೊತ್ತಿದ್ದೀನಿ. ಅದಕ್ಕಾಗಿ ಗಡ್ಡ ಬಿಟ್ಟಿದ್ದು, ಜುಲೈ 30ರ ಬಳಿಕ‌ ಗಡ್ಡದ ಮಹಿಮೆ ರಾಜ್ಯಕ್ಕೆ ತಿಳಿಯಲಿದೆ ಎಂದು ಹೇಳಿದರು.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ