ಘಟಪ್ರಭಾ :ಕುಡಿದ ಅಮಲಿನಲ್ಲಿ ರೈಲಿಗೆ ವ್ಯಕ್ತಿಯೊರ್ವ ತಲೆ ಕೊಟ್ಟ ಘಟನೆ ನಿನ್ನೆ ರಾತ್ರಿ ಘಟಪ್ರಭಾ ರೈಲ್ವೆ ಗೇಟ್ ಹತ್ತಿರ ನಡೆದಿದೆ.
ಮೃತ ವ್ಯಕ್ತಿಯನ್ನು ರಾಯಭಾಗ ತಾಲೂಕಿನ ನಿಡಗುಂದಿ ಗ್ರಾಮದ ನಿಂಗಪ್ಪ ಗವಾನಿ(55) ಎಂದು ತಿಳಿದು ಬಂದಿದೆ. ಈತ ಕಳೆದ ಕೆಲವು ವರ್ಷಗಳಿಂದ ಮಲ್ಲಾಪೂರ ಪಿ.ಜಿಯ ಒಬ್ಬರ ಹೊಲಗದ್ದೆಯಲ್ಲಿ ಕುಟುಂಬ ಸಮೇತ ದುಡಿಯಲು ಇದ್ದನೆಂದು ತಿಳಿದು ಬಂದಿದೆ. ಈತ ಕುಡಿತದ ಚಟದ ಹಿಂದೆ ಬಿದ್ದು, ಮದ್ಯದ ದಾಸನಾಗಿದ್ದನೆಂದು ಹೇಳಲಾಗುತ್ತಿದೆ. ಈತ ಕುಡಿಯಲು ಪ್ರಾರಂಭಿಸಿದರೆ ವಾರ ಪೂರ್ತಿ ಕಳೆದರೂ ಮನೆಗೆ ಹೋಗುತ್ತಿರಲಿಲ್ಲವಂತೆ.
ಹೀಗೆ ನಿನ್ನೆಗೆ ಆತ ಮನೆ ಬಿಟ್ಟು ನಾಲ್ಕು ದಿನಗಳಾಗಿದವೆಂದು ಹೇಳಲಾಗುತ್ತಿದೆ. ನಿನ್ನೆ ರಾತ್ರಿ ಸುಮಾರು 10 ಗಂಟೆಗೆ ಘಟಪ್ರಭಾದಿಂದ ಮಿರಜಗೆ ಹೊರಡುವ ನಿಜಾಮುದ್ದಿನ್ ಎಕ್ಸಪ್ರೆಸ್ ರೈಲಿಗೆ ತನ್ನ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ತಿಳಿದು ಬಂದಿದೆ.
ಸ್ಥಳಕ್ಕೆ ರೈಲ್ವೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
CKNEWSKANNADA / BRASTACHARDARSHAN CK NEWS KANNADA