ಮಂಡ್ಯ: ಕೆಆರ್ಎಸ್ ಡ್ಯಾಂ ಬಿರುಕು ಬಿಟ್ಟಿದೆ ಅಂತ ಹೇಳಿ, ಇದೀಗ ಆ ರೀತಿ ಹೇಳಿಯೇ ಇಲ್ಲ ಎಂದು ಸಂಸದೆ ಸುಮಲತಾ ಉಲ್ಟಾ ಹೊಡೆದಿದ್ದಾರೆ.
ಮೈಸೂರು: ನಾನು ಕೆಆರ್ಎಸ್ ಬಿರುಕು ಬಿಟ್ಟಿದೆ ಅಂತ ನಾನು ಸಾರ್ವಜನಿಕವಾಗಿ ಅಥವಾ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿಲ್ಲ. ಬಿರುಕು ಬಿಟ್ಟಿದಿಯಾ ಅಂತ ದಿಶಾ ಸಭೆಯಲ್ಲಿ ಕೇಳಿದ್ದೇನೆ. ಗಣಿಗಾರಿಕೆಯಿಂದ ಕೆಆರ್ಎಸ್ ಬಿರುಕಾಗುತ್ತೆ ಎಂಬ ಆತಂಕ ನನಗೆ ಈಗಲೂ ಶೇ.500 ಇದೆ. ಇದನ್ನೇ ನಾನು ಸಭೆಯಲ್ಲಿ ಹೇಳಿದ್ದೇನೆ. ಆದರೆ ಅದನ್ನೇ ಹೊರಗೆ ಬೇರೆ ರೀತಿಯಲ್ಲಿ ಅರ್ಥೈಸಿ ಇಷ್ಟೆಲ್ಲ ಮಾಡಿದ್ದಾರೆ ಎಂದರು.
ಸುಮಲತಾರ ಕೆಆರ್ಎಸ್ ಬಿರುಕು ಹೇಳಿಕೆ ಬಳಿಕ, ಡ್ಯಾಂನಲ್ಲಿ ಯಾವುದೇ ಬಿರುಕಿಲ್ಲ. ಡ್ಯಾಂ ಸುರಕ್ಷಿತ ಎಂದು ಸರ್ಕಾರಕ್ಕೆ ಅಧಿಕಾರಿಗಳು ವರದಿ ನೀಡಿದ್ದರು. ಇದರ ಬೆನ್ನಲ್ಲೇ ಸುಮಲತಾ, ತಮ್ಮದೇ ಹೇಳಿಕೆ ಬಗ್ಗೆ ಉಲ್ಟಾ ಹೊಡೆದಿದ್ದಾರೆ.
CKNEWSKANNADA / BRASTACHARDARSHAN CK NEWS KANNADA