ಬೆಳಗಾವಿ: ” ಕ್ಷೇತ್ರದಲ್ಲಿ ಬಾಕಿ ಉಳಿದ ಕಾಮಗಾರಿಯನ್ನು ಚುರುಕುಗೊಳಿಸಿ, ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳಿ” ಎಂದು ಅಧಿಕಾರಿಗಳಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಶಾಸಕ ಸತೀಶ ಜಾರಕಿಹೊಳಿ ಸೂಚನೆ ನೀಡಿದರು.
ಇಲ್ಲಿನ ತಾ.ಪಂ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ, 14 ಗ್ರಾ.ಪಂ ವ್ಯಾಪ್ತಿಯ ನರೇಗಾ ಯೋಜನೆಯ ವಿವಿಧ ಅಭಿವೃದ್ಧಿ ಕಾಮಗಾರಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಫಲಾನುಭವಿಗಳಿಗೆ ಅನುಕೂಲವಾಗುವ ಸರ್ಕಾರ ಯೋಜನೆಗಳು ಶೀಘ್ರವೇ ಅನುಮತಿ ನೀಡಿ, ಕ್ಷೇತ್ರದಲ್ಲಿ ಬಾಕಿ ಉಳಿದ 23 ಕೋಟಿ ರೂ. ಅನುದಾನಲ್ಲಿ ಶಾಲಾ ಕಟ್ಟಡ, ತಡೆ ಗೋಡೆ, ಶೌಚಾಲಯ ನಿರ್ಮಾಣವಾಗಲಿ. ಕಾರ್ಮಿಕರ ವೇತನ ಬಿಟ್ಟು , ಅನಗತ್ಯವಾಗಿ ಅನುದಾನ ಬಳಕೆ ಮಾಡಬೇಡಿ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಯಮಕನಮರಡಿ 14 ಗ್ರಾಮಗಳಲ್ಲಿನ ಶಾಲಾ ತಡೆಗೋಡೆಗಳ ಕಾಮಗಾರಿ ಶೀಘ್ರವೇ ಮುಗಿಸಿ, ನಿಮ್ಮ ವ್ಯಾಪ್ತಿಯಲ್ಲಿ ಬರುವ ಗೋಡೆಗಳ ನಿರ್ಮಾಣಕ್ಕೆ ತಕರಾರು ಬಂದರೆ. ಸ್ಥಳೀಯರ ಅನುಮತಿ ಪಡೆದು ಸುತ್ತಳತೆ ನೋಡಿಕೊಂಡು ಕಾಮಗಾರಿ ಪೂರ್ಣಗೊಳ್ಳಿಸಿ ಎಂದರು.
ಬೆಡ್ ನಿರ್ಮಾಣಕ್ಕೆ ಸರ್ಕಾರದಿಂದ 10 ಸಾವಿರ ಬೇಕಿದೆ:-
ಗ್ರಾಮೀಣ ಅಭಿವೃದ್ಧಿ ಸಹಾಯಕ ನಿರ್ದೇಶಕ ರಾಜೇಂದ್ರ ಮೊರಬದ್ ಅವರು ಮಾತನಾಡಿ, ಜಾನುವಾರುಗಳ ಸುರಕ್ಷತೆಗಾಗಿ ಬೆಡ್ ಅವಶ್ಯಕತೆ ಇದೆ. ಗ್ರಾಮೀಣ ಭಾಗದಲ್ಲಿ ಪ್ರತಿಯೊಂದು ಮನೆಗಳಿಗೆ ಬೆಡ್ ನಿರ್ಮಾಣಕ್ಕೆ ಒಳ್ಳೆಯ ಪ್ರಸಂಶೆ ಸಿಕ್ಕಿದೆ. ಈಗಿರುವ ಅನುದಾನದಲ್ಲಿ ಬೆಡ್ ನಿರ್ಮಾಣ ಹಣ ಸಾಲುತ್ತಿಲ್ಲ. ಸರ್ಕಾರ ಹೆಚ್ಚುವರಿಯಾಗಿ 10 ಸಾವಿರ ನೀಡಿದರೆ ಮೇಲ್ಚಾವಣಿ ನಿರ್ಮಾಣಕ್ಕೆ ಅನುಕೂಲವಾಗುತ್ತದೆ. ಸರ್ಕಾರ ಇದರ ಗಮನ ಹರಿಸಬೇಕೆಂದು ಶಾಸಕರ ಮೂಲಕ ಸರ್ಕಾರಕ್ಕೆ ಮನವಿ ಮಾಡಿಕೊಂಡರು.
ಹೊಸ ವಂಟಮೂರಿಗೆ ಪಿಡಿಓ ಕೊರತೆ :
ಹೊಸ ವಂಟಮೂರಿ ಗ್ರಾ.ಪಂಗೆ ಕಳೆದ ಮೂರು ವರ್ಷಗಳಿಂದ ಪಿಡಿಓ ಕೊರತೆ ಇದೆ. ಎರಡು ತಿಂಗಳವರೆಗೂ ಮಾತ್ರ ಪಿಡಿಓ ಕಾರ್ಯ ನಿರ್ವಹಿಸುತ್ತಾರೆ. ಬಳಿಕ ಪಿಡಿಓಗಳು ಗ್ರಾ.ಪಂ ಗೆ ಬರುವುದೇ ಅಪರೂಪವಾಗಿದೆ ಹೀಗಾಗಿ ಚಿಕ್ಕ ಪುಟ್ಟ ಕೆಲಸಗಳು ನೆನೆಗುದಿಗೆ ಬಿದ್ದಿವೆ ಎಂದು ಗ್ರಾ.ಪಂ ಅಧ್ಯಕ್ಷ ಆರೋಪಿಸಿದರು, ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ನಿರಂತರವಾಗಿ ಕಾರ್ಯನಿರ್ವಸುವ ಪಿಡಿಓ ನೇಮಕ ಮಾಡಲಾಗುವುದು. ಅಲ್ಲಿವರೆಗೂ ಕಾಮಗಾರಿ ಬಾಕಿ ಉಳಿಸಬೇಡಿ ಎಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ತಾ.ಪಂ ಇಓ ರವಿ ಕರಲಿಂಗನ್ನವರ , ಗ್ರಾಮ ಪಂಚಾಯಿತಿ ಅಧಿಕಾರಿಗಳು ಇದ್ದರು.