ದೆಹಲಿ : ರಮೇಶ್ ಜಾರಕಿಹೊಳಿ ಇದೀಗ ದಿನಕ್ಕೊಂದು ಟ್ವಿಸ್ಟ್ ನೀಡುತ್ತಿದ್ದಾರೆ. ತಡರಾತ್ರಿಯೇ ಬೆಳಗಾವಿಯಿಂದ ಬೆಂಗಳೂರಿಗೆ ಆಗಮಿಸಿದ್ದ ರಮೇಶ್ ಇದೀಗ ದಿಢೀರ್ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.
ಈಗಾಗಲೇ ವಿವಿಧ ಮಠಾಧೀಶರು ಹಾಗೂ ದೇವೇಂದ್ರ ಫಡ್ನವಿಸ್ರಂತಹ ಹಿರಿಯ ನಾಯಕರನ್ನ ಭೇಟಿ ಮಾಡಿದ್ದ ರಮೇಶ್ ಜಾರಕಿಹೊಳಿ ಇಂದು ಸಿಎಂ ಯಡಿಯೂರಪ್ಪರನ್ನ ಭೇಟಿಯಾಗೋದಾಗಿ ಹೇಳಿದ್ದರು. ಇದಕ್ಕಾಗಿ 2 ದಿನಗಳ ಬೆಂಗಳೂರು ಪ್ರವಾಸವನ್ನೂ ಕೈಗೊಂಡಿದ್ದರು.
ಆದರೆ ಇದೀಗ ನೇರವಾಗಿ ಏರ್ ಪೋರ್ಟ್ಗೆ ತೆರಳಿದ ರಮೇಶ್ ಜಾರಕಿಹೊಳಿ ಅಲ್ಲಿಂದ ದೆಹಲಿಗೆ ಹಾರಿದ್ದಾರೆ ಎನ್ನಲಾಗಿದೆ.
ಇದಾದ ಬಳಿಕ ತೀರಾ ಇತ್ತೀಚೆಗೆ ಶಾಸಕ ಸ್ಥಾನಕ್ಕೂ ರಾಜೀನಾಮೆ ಕೋಡೋದಾಗಿ ರಮೇಶ್ ಹೇಳಿದ್ದರು.
ಆದರೆ ಸಹೋದರರ ಸಲಹೆಯನ್ನ ಕೇಳಿ ಈ ನಿರ್ಧಾರದಿಂದ ಹಿಂದೆ ಸರಿದಿದ್ದ ರಮೇಶ್, ಯಡಿಯೂರಪ್ಪರ ಭೇಟಿಗೆ ಮುಂದಾಗಿದ್ದರು. ಇದೀಗ ದಿಢೀರ್ ಬೆಳವಣಿಗೆ ಎಂಬಂತೆ 11:45ರ ಸುಮಾರಿಗೆ ದೆಹಲಿಗೆ ರಮೇಶ್ ಜಾರಕಿಹೊಳಿ ತೆರಳಿದ್ದು ಹೈಕಮಾಂಡ್ ಜೊತೆ ಮಾತುಕತೆಗೆ ಮುಂದಾಗ್ತಾರೆ ಎನ್ನಲಾಗಿದೆ.