Breaking News

ಯುವ ಮುಖಂಡ ರಾಹುಲ್ ಜಾರಕಿಹೊಳಿ ಅವರು KEB ಹೆಸ್ಕಾಂ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಸ್ಯಾನಿಟ್ಜರ,ಮಾಸ್ಕ ವಿತರಣೆ


ಗೋಕಾಕ: ಕೆಪಿಸಿಸಿ ಕಾರ್ಯಾಧಕ್ಷ ,ಶಾಸಕ ಸತೀಶ್ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಯುವ ಮುಖಂಡರಾದ ರಾಹುಲ್ ಜಾರಕಿಹೊಳಿ ಅವರು ಘಟಪ್ರಭಾ ವಿಭಾಗದ ಎಲ್ಲ KEB ಹೆಸ್ಕಾಂ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ 200 ಕ್ಕೂ ಹೆಚ್ಚು ಸ್ಯಾನಿಟ್ಜರ ಹಾಗೂ ಮಾಸ್ಕಗಳನ್ನು ವಿತರಿಸಿದರು.

ಈ ಸಮಯದಲ್ಲಿ ಮಾತನಾಡಿದ ರಾಹುಲ್ ಜಾರಕಿಹೊಳಿ ಅವರು ಕೋವಿಡ ಈಗ ತಾನೆ ಇಳಿಮುಖ ಕಾಣುತ್ತಿದೆ, ಜನರು ಧೈರ್ಯದಿಂದ ಇರಬೇಕು ಮಾಸ್ಕ ಧರಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಲ್ಲರೂ ತಪ್ಪದೇ ವಾಕ್ಸಿನ್ ಹಾಕಿಸಿಕೊಳ್ಳಿ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಪಾಂಡು ಮನ್ನಿಕೇರಿ, ಶಿವು ಪಾಟೀಲ್, ಮಾರುತಿ ಗುಡಗುದ್ದಿ, ಹಾಗೂ ಹೆಸ್ಕಾಂ ಕಾರ್ಯನಿರ್ವಾಹಕ ಅಭೀಯಂತರರು ಎನ್ ವಿ ಮೂಡಲಗಿ, ಘಟಪ್ರಭಾ ಸಹಾಯಕ ಕಾರ್ಯನಿರ್ವಾಹಕ ಅಭೀಯಂತರರು ಎಮ್, ಎಸ್ ನಾಗನ್ನವರ , ಗೋಕಾಕ ಕಾರ್ಯನಿರ್ವಾಹಕ ಅಭೀಯಂತರರು ಎಸ್ ಪಿ ವರಾಳೆ, ಎಸ್ ಶಾಖಾ ಅಧಿಕಾರಿಗಳಾದ ಎಸ್ ಎಸ್ ಮಠ, ಎಸ್ ಬಿ ಕದಮ . ಎಸ್ ಎಸ್ ಎಳಿಗಾರ, ಪಿ ಆರ್ ಯಡಹಳ್ಳಿ, ಬಿ ಜಿ ಬಡಿಗೇರ , ಪಿ ಸಿ ಧರ್ಮ, ಎ ಬಿ ಇರಡ್ಡಿ, ಬಿ ಬಿ ಬಾಗವಾಡಗಿ ಎಸ್ ಎಮ್ ಚೌಗಲಾ ರೆವಪ್ಪಾ ಪಿಡಾಯಿ, ಕೃಷ್ಣಾ ದಿವಟ್ಟಗಿ ಹಾಗೂ KEB ಹೆಸ್ಕಾಂ ಸಿಬ್ಬಂದಿಗಳು ಉಪಸ್ಥಿತರಿದ್ದರು.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

*ರೈತರು ಸಾಲಕ್ಕೆ ಹೆದರದೇ ಧೈರ್ಯವಾಗಿ ಜೀವನ ಸಾಗಿಸಿ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ : ಮಾನವ ಜನ್ಮ ಪವಿತ್ರವಾದದ್ದು. ಜೀವನವೆಂದ ಮೇಲೆ ಪ್ರತಿಯೊಬ್ಬರಿಗೂ ಕಷ್ಟಗಳು ಬಂದೇ ಬರುತ್ತವೆ. ಜೊತೆಗೆ ಸಾಲವೂ ಕೂಡ ಇದ್ದೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ