ಗೋಕಾಕ :ಕಳೆದ ಮಾರ್ಚ್ ತಿಂಗಳಲ್ಲಿ ಬೆಳಗಾವಿಯ ರಾಮಕಿಂಡ ಗಲ್ಲಿಯಲ್ಲಿ ಎಂ ಈ ಎಸ್ ಪುಂಡರು ಕನ್ನಡ ವಿರೋಧಿ ಘೋಷಣೆ ಕೂಗಿ ಪ್ರತಿಭಟನೆ ನಡೆಸಿ ಪುಂಡಾಟ ನಡೆಸಿದ್ದರು ಆ ಪ್ರತಿಭಟನೆಯ ಫೋಟೋ ವನ್ನು ಬಳಸಿ ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ಕನ್ನಡ ಹಾಗೂ ಮರಾಠಿ ಬಾಂಧವರ ಮಧ್ಯೆ ವೈಷಮ್ಯ ಸೃಷ್ಟಿಸಲು ಪೋಸ್ಟನ್ನು ಮಾಡಿದ್ದರು ಬಗ್ಗೆ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತಕ್ಷಣ ಎಚ್ಚೆತ್ತ ಗ್ರಾಮೀಣ ಠಾಣೆಯ ಪೊಲೀಸರು ಎಂಇಎಸ್ ಪುಂಡರಾದ ವಿಶಾಲ್ ಥಾಪರೆ ದಿಗಂಬರ್ ದೆಲೇಕರ್ ನಿಖಿಲ್ ಕೆಸರ್ಕರ್ ಎಂಬ ಕಿಡಿಗೇಡಿಗಳನ್ನು ಬಂಧಿಸಿದ್ದರು ಆದರೆ ಬೆಳಗಾವಿ ಪೊಲೀಸ್ ಆಯುಕ್ತರು ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳದೆ ಯಾವುದೋ ರಾಜಕೀಯ ಒತ್ತಡಕ್ಕೆ ಮಣಿದು ಸಿಬ್ಬಂದಿಗಳಾದ ಪೊಲೀಸ್ ಸಿಬ್ಬಂದಿಗಳಾದ ಗೋವಿಂದ ಪೂಜಾರಿ ನಾರಾಯಣ್ ಚಿಪ್ಪಲಕಟ್ಟಿ ಚೆನ್ನಪ್ಪ ಹುಣಶಾಳ ಎಂಬುವರನ್ನು ಅಮಾನತು ಗಳಿಸಿದ್ದು ಖಂಡನಿಯ ಪೋಲಿಸ್ ಸಿಬ್ಬಂದಿಯ ಅಮಾನತುಗೊಳಿಸಿದನ್ನು ಕರ್ನಾಟಕ ರಕ್ಷಣಾ ವೇದಿಕೆ ಖಂಡನೆ ಮಾಡುತ್ತದೆ ಸನ್ಮಾನ್ಯ ಪೊಲೀಸ್ ಆಯುಕ್ತ ಬೆಳಗಾವಿ ಬೆಳಗಾವಿ ಪೊಲೀಸ್ ಠಾಣೆಯ ಗ್ರಾಮೀಣ ಠಾಣೆಯ ಸಿಬ್ಬಂದಿಗಳ ಅಮಾನತನ್ನು ರದ್ದುಗೊಳಿಸಬೇಕು ಹಾಗೂ ಈ ಕೃತ್ಯಕ್ಕೆ ಕಾರಣರಾದ ಎಂ ಈ ಎಸ್ ಪುಂಡರ ಮೇಲೆ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಶಿವರಾಮೇಗೌಡ ಹಾಗೂ ಜಿಲ್ಲಾ ಅಧ್ಯಕ್ಷರಾದ ವಾಜಿದ್ ಹಿರೇಕೊಡಿ ಇವರ ನೇತೃತ್ವದಲ್ಲಿ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಮಾಡಲಾಗುವುದು ಈ ಸಂಧರ್ಭದಲ್ಲಿ ಕರವೇ ಜಿಲ್ಲಾ ಸಂಚಾಲಕ ರೆಹಮಾನ್ ಮೊಕಾಶಿ ತಾಲ್ಲೂಕು ಅದ್ಯಕ್ಷ ಶೆಟ್ಟೆಪ್ಪಾ ಗಾಡಿವಡ್ಡರ ದೂಪದಾಳ ಘಟಕ ಅದ್ಯಕ್ಷ ರವಿ ನಾವಿ ಉಪಸ್ಥಿತರಿದ್ದರು.
Check Also
*ರೈತರು ಸಾಲಕ್ಕೆ ಹೆದರದೇ ಧೈರ್ಯವಾಗಿ ಜೀವನ ಸಾಗಿಸಿ : ಶಾಸಕ ಬಾಲಚಂದ್ರ ಜಾರಕಿಹೊಳಿ
ಮೂಡಲಗಿ : ಮಾನವ ಜನ್ಮ ಪವಿತ್ರವಾದದ್ದು. ಜೀವನವೆಂದ ಮೇಲೆ ಪ್ರತಿಯೊಬ್ಬರಿಗೂ ಕಷ್ಟಗಳು ಬಂದೇ ಬರುತ್ತವೆ. ಜೊತೆಗೆ ಸಾಲವೂ ಕೂಡ ಇದ್ದೇ …