ಗೋಕಾಕ್ ತಾಲೂಕಿನ ಕೊಣ್ಣೂರ ಸರಕಾರಿ ಆಸ್ಪತ್ರೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಗುರುವಾರ ಭೇಟಿ ನೀಡಿ, ಪರಿಶೀಲಿಸಿದರು.
ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ಸರಿಯಾಗಿ ನೀಡಲಾಗುತ್ತಿಯೋ ? , ಇಲ್ಲವೋ ಎಂಬುವುದನ್ನು ಪರಿಶೀಲಿಸಿದರು. ಕೋವಿಡ್ ಕೇಸ್ ಗಳ ವರದಿ ಪಡೆದರು. ಜತೆಗೆ ಆಸ್ಪತ್ರೆಯಲ್ಲಿರುವ ಸಮಸ್ಯೆಗಳನ್ನು ಸಹ ಆಲಿಸಿದರು.
ತದನಂತರ ಕೊರೊನಾ ವಾರಿಯರ್ಸ್ ಗಳಾದ ಆಸ್ಪತ್ರೆ ಸಿಬ್ಬಂದಿ, ಪೊಲೀಸರ ಆರೋಗ್ಯದ ದೃಷ್ಟಿಯಿಂದ ಮಾಸ್ಕ್ , ಸ್ಯಾನಿಟೈಸರ್ ವಿತರಿಸಿದರು.
ಈ ಸಂದರ್ಭದಲ್ಲಿ ಡಾ.ಜೋತಿಲಕ್ಷ್ಮೀ, ಡಾ. ಹರಿಶ ಹೊಸಮನಿ, ಅಪ್ಪಸಾಹೇಬ ನೇಗಿನಹಾಳ, ಅಪ್ಪಸಾಹೇಬ್ ಪಾಟೀಲ್, ಅಜ್ಜಪ್ಪ ಕರನಿಂಗ್, ಪ್ರವೀಣ್ ಗುಡ್ದಾಕಾಯು ಭರಮಣ್ಣ ಬೆಳವಿ, ಸುನೀಲ್ ಗುಡ್ದಾಕಾಯು, ರಾಹುಲ್ ಬಡೇಸಗೋಳ್ ಮಂಜುಳಾ ರಾಮಗಾನಟ್ಟಿ, ಪಾಂಡು ಮಣ್ಣಿಕೇರಿ , ವಿವೇಕ ಜತ್ತಿ ಸೇರಿದಂತೆ ಇತರರು ಇದ್ದರು.