ಕರ್ನಾಟಕ ಸರ್ಕಾರ ಮತ್ತೆ ರೈತ ಬಡವರ ವಿರೋಧಿ ಧೋರಣೆಯನ್ನು ಮುಂದುವರೆಸಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಸಂಚಾಲಕ ರೆಹಮಾನ್ ಮೊಕಾಶಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಸಹಕಾರಿ ಸಂಘಗಳ ಸಾಲವನ್ನು ಪಾವತಿಸಲು ಮೂರು ತಿಂಗಳು ಮುಂದಕ್ಕೆ ಹಾಕಿದ್ದು ರೈತರಿಗೆ ಹಾಗೂ ಬಡವರಿಗೆ ಖುಷಿ ತಂದಿತ್ತು ಆದರೆ ಈಗ ಒಮ್ಮಿಂದೊಮ್ಮಿಗೆ ಮೇ ಮೂವತ್ತು ಸಾಲ ತುಂಬಲು ಕೊನೆಯ ದಿನಾಂಕ ಎಂದು ಘೋಷಣೆ ಮಾಡಿದ್ದರಿಂದ ರೈತರು ಬಡವರಿಗೆ ಶಾಕ್ ನೀಡಿದಂತಾಗಿದೆ ಸುಮಾರು ಎರಡು ತಿಂಗಳು ಗಳಿಂದ ಸತತವಾಗಿ ಲಾಕಡೌನ್ ಮಾಡಿರುವುದರಿಂದ ಜನರು ಹೊಟ್ಟೆಗೆ ಇಲ್ಲದೆ ಪರದಾಡುವಂತಹ ಪರಿಸ್ಥಿತಿ ಇದ್ದು ಸರ್ಕಾರ ಇಂತಹ ಸಂದರ್ಭದಲ್ಲಿ ಮತ್ತೆ ಬಡವರ ಹಾಗೂ ರೈತರ ವಿರೋಧಿ ಧೋರಣೆ ತಾಳಿದ್ದು ನಿಜವಾಗಿಯೂ ಖಂಡನೀಯ ಕೂಡಲೇ ಸರ್ಕಾರ ಹೊಸ ಆದೇಶ ಹಿಂಪಡೆಯಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ
CKNEWSKANNADA / BRASTACHARDARSHAN CK NEWS KANNADA