ಬೆಂಗಳೂರು: ಕರೊನಾ ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿರುವ ಬಡ ಜನರ ಜೀವನಮಟ್ಟ ಸುಧಾರಣೆಯ ಅನುಕೂಲಕ್ಕಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶೇಷ ಪ್ಯಾಕೇಜ್ ಘೋಷಿಸಿದ್ದಾರೆ. 1,250 ಕೋಟಿಗೂ ಹೆಚ್ಚು ಮೊತ್ತದ ಪ್ಯಾಕೇಜ್ ಇದಾಗಿದ್ದು,. ಯಾರಿಗೆ ಎಷ್ಟು ಸಹಾಯಧನ ಸಿಗಲಿದೆ ಎಂಬುದರ ಡಿಟೇಲ್ಸ್ ಇಲ್ಲಿದೆ.
ಆಟೋ-ಟ್ಯಾಕ್ಷಿ ಚಾಲಕರಿಗೆ 3 ಸಾವಿರ ಸಹಾಯಧನ
ಬೀದಿಬದಿ ವ್ಯಾಪಾರಿಗಳಿಗೆ 3 ಸಾವಿರ ರೂಪಾಯಿ
ಹೂವು-ಹಣ್ಣು ವರ್ತಕರಿಗೆ 3 ಸಾವಿರ ರೂಪಾಯಿ
ಕಲಾವಿದರು, ಕಲಾ ತಂಡಗಳಿಗೆ ತಲಾ 3 ಸಾವಿರ ರೂಪಾಯಿ
ಅಸಂಘಟಿತ ಕಾರ್ಮಿಕರಿಗೆ 2 ಸಾವಿರ ರೂಪಾಯಿ
ಕರೊನಾ ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ
ಸವಿತಾ ಸಮಾಜದವರಿಗೆ 3 ಸಾವಿರ ರೂಪಾಯಿ
ಎಪಿಎಲ್ ಕಾರ್ಡ್ದಾರರಿಗೆ ಕೆಜಿಗೆ 15 ರೂಪಾಯಿಯಂತೆ ಅಕ್ಕಿ ವಿತರಣೆ
ಸಹಾಯಧನ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಆಗಲಿದೆ
ಇಂದಿರಾ ಕ್ಯಾಂಟೀನ್ಗಳಲ್ಲಿ ಉಚಿತವಾಗಿ ಊಟ ನೀಡಲಾಗುತ್ತಿದೆ. ಕೋವಿಡ್ ಹಿನ್ನೆಲೆ ವಿಶೇಷ ಪ್ಯಾಕೇಜ್ಗೆ ಹಣದ ಕೊರತೆ ಇಲ್ಲ. ಎಲ್ಲ ಫಲಾನುಭವಿಗಳಿಗೂ ಸಹಾಯಧನ ತಲುಪಲಿದೆ. ಸಹಾಯಧನ ಅರ್ಹರಿಗೆ ತಲುಪುವಂತೆ ಶಕ್ತಿ ಮೀರಿ ಕೆಲಸ ಮಾಡಲಾಗುವುದು. ಲಾಕ್‍ಡೌನ್ ಮುಂದುವರಿಸುವ ಬಗ್ಗೆ ಮೇ 23ರಂದು ನಿರ್ಧಾರ ಪ್ರಕಟಿಸಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ಇನ್ನು ಕೋವಿಡ್ನಿಂದ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥವಾದ ಮಕ್ಕಳ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಒಂದೆರಡು ದಿನದಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಿಎಂ ಹೇಳಿದರು
CKNEWSKANNADA / BRASTACHARDARSHAN CK NEWS KANNADA