ಬೆಳಗಾವಿ: ಪರಿಹಾರ ನೀಡಲು ಆಗ್ರಹ ,,,ಮಾನ್ಯ ಘನ ಸರ್ಕಾರದ ಮುಖ್ಯಮಂತ್ರಿಗಳು ಎಕಾಎಕಿ ಲಾಕ್ ಡೌನ ಮಾಡುವುದಿಲ್ಲ ಎನ್ನುತ್ತಾ ಒಮ್ಮಿಂದೊಮ್ಮಿಗೆ ಲಾಕ್ ಡೌನ್ ಮಾಡಿದ್ದಾರೆ ಕರೋನ ಹೆಚ್ಚಾದ ಹಿನ್ನೆಲೆ ಮಾಡಿರಬಹುದು ಆದರೆ ಬಡವರ ಕೂಲಿ ಕಾರ್ಮಿಕರ ಗತಿ ಎನಾಗಬೇಕು ಅವರು ಏನು ಮಾಡಬೇಕು ಹೊಟ್ಟೆ ಹೇಗೆ ತುಂಬಿಸಿ ಕೊಳ್ಳಬೇಕು ವಾರದ ಸಂಘ ಸಂಸ್ಥೆಗಳು ತೆಗೆದ ಸಾಲ ಹೇಗೆ ಮರು ಪಾವತಿ ಮಾಡಬೇಕು ಸರ್ಕಾರ ಯಾಕೆ ಬಡವರಿಗೆ ಸಹಾಯ ಮಾಡುತ್ತಿಲ್ಲ ಕೂಡಲೇ ಸನ್ಮಾನ್ಯ ಮುಖ್ಯಮಂತ್ರಿಗಳು ಕೂಡಲೇ ತಮಿಳುನಾಡು ಆಂಧ್ರ ಪ್ರದೇಶ ಕೇರಳದ ಮಾದರಿಯಲ್ಲಿ ಆಹಾರದ ಕಿಟ್ ಗಳನ್ನು ನೀಡಬೇಕು ಹಾಗೂ ಪ್ರತಿ ಕುಟುಂಬಕ್ಕೆ ಹತ್ತು ಸಾವಿರ ರೂಪಾಯಿ ಧನ ಸಹಾಯ ಮಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಸಂಚಾಲಕ ರೆಹಮಾನ್ ಮೊಕಾಶಿ ಆಗ್ರಹಿಸಿದರು ಬಡವರು ಈ ಸಂಧರ್ಭದಲ್ಲಿ ಸರ್ಕಾರದ ಮೇಲೆ ನಿರೀಕ್ಷೆ ಮಾಡದೆ ಮತ್ತ್ಯಾರ ಮೇಲೆ ಮಾಡಬೇಕು ಸರ್ಕಾರ ಪರಿಹಾರ ನೀಡದೆ ಇದ್ದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾದ್ಯಕ್ಷ ಶಿಮರಾಮೇಗೌಡರು ಹಾಗೂ ಜಿಲ್ಲಾ ಅದ್ಯಕ್ಷರು ವಿ ಆ ಹೀರೆಕೊಡಿ ಯವರ ನೇತೃತ್ವದಲ್ಲಿ ರಾಜ್ಯದಾದ್ಯಂತ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ
Check Also
*ರೈತರು ಸಾಲಕ್ಕೆ ಹೆದರದೇ ಧೈರ್ಯವಾಗಿ ಜೀವನ ಸಾಗಿಸಿ : ಶಾಸಕ ಬಾಲಚಂದ್ರ ಜಾರಕಿಹೊಳಿ
ಮೂಡಲಗಿ : ಮಾನವ ಜನ್ಮ ಪವಿತ್ರವಾದದ್ದು. ಜೀವನವೆಂದ ಮೇಲೆ ಪ್ರತಿಯೊಬ್ಬರಿಗೂ ಕಷ್ಟಗಳು ಬಂದೇ ಬರುತ್ತವೆ. ಜೊತೆಗೆ ಸಾಲವೂ ಕೂಡ ಇದ್ದೇ …