Breaking News

ಜನರ ಸೇವೆಗೆ ಹೆಲ್ಪ ಲೈನ್ ಹಾಗೂ ವಾರ್‌ರೂಮ್, ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಿ:ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ.


ಗೋಕಾಕ: ಕೋವಿಡ್ ಹಿನ್ನಲೆ ಸಾರ್ವಜನಿಕರಿಗೆ ಸ್ಫಂಧಿಸುವ ನಿಟ್ಟಿನಲ್ಲಿ ತಾಲೂಕು ಆಡಳಿತದ ವತಿಯಿಂದ ಕೋರ್ ಕಮೀಟಿ ರಚಿಸಲಾಗಿದ್ದು, ಜನರ ಸೇವೆಗೆ ಹೆಲ್ಪ ಲೈನ್ ಹಾಗೂ ವಾರ್‌ರೂಮ್ ಸ್ಥಾಪಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ ಮನವಿ ಮಾಡಿದ್ದಾರೆ.

ಅವರು, ನಗರದ ಮಿನಿವಿಧಾನ ಸೌಧದಲ್ಲಿ ಪತ್ರಿಕಾಗೊಷ್ಠಿ ನಡೆಸಿ ಮಾತನಾಡಿ, ತಾಲೂಕು ಆಡಳಿತದಿಂದ ಜನರಿಗೆ ಸ್ಫಂಧಿಸಲು ದಿನದ ೨೪ ಗಂಟೆ ಸಹಾಯವಾಣಿ ತೆರೆಯಲಾಗಿದ್ದು, ಈ ಸಹಾಯವಾಣಿಯಲ್ಲಿ ಸಿಬ್ಬಂಧಿಗಳು ಮೂರು ಶಿಪ್ಟಗಳಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಕೋವಿಡ್ ಸಹಾಯವಾಣಿ ಸಂಖ್ಯೆ ೦೮೩೩೨-೨೨೮೦೭೩ಗೆ ಕರೆ ಮಾಡಿ ಬೇಡ್ ಹಾಗೂ ಕೋವಿಡ್ ಸಂಬಂದಧಪಟ್ಟ ಎಲ್ಲ ಸಹಾಯ ಪಡೆಯಬಹುದಾಗಿದೆ ಎಂದರು.

ವಾರ್ ರೂಮ್‌ನಲ್ಲಿ ಕೋವಿಡ್ ಸೊಂಕಿತರ ಕಾಂಟಾಕ್ಟ ಟ್ರೇಸಿಂಗ್ ಮಾಡಿ ಆನಲೈನ್ ಅಪ್ಲೋಡ್ ಮಾಡಲು ಸಿಬ್ಬಂಧಿ, ಕ್ವಾರಂಟೈನ್ ನಿಯಮಾವಳಿ ಪಾಲನೆಗೆ ಕ್ವಾರಂಟೈನ್ ವಾಚ್‌ರಗಳು, ದೂರವಾಣಿ ಮುಖಾಂತರ ಹೊಮ್ ಐಸ್ಯೂಲೆಶನ್ ಮಾನಿಟರ್ ಮಾಡಲು ಸಿಬ್ಬಂದಿ ಮತ್ತು ಮದುವೆ ಮತ್ತು ಅಂತ್ಯ ಸಂಸ್ಕಾರಕ್ಕೆ ನೂಡಲ್ ಅಧಿಕಾರಿ ನೇಮಕ ಹಾಗೂ ಆಕ್ಸಿಜನ್ ಕೊರತೆ ಮಾನಿಟರ್‌ಗೆ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿಯ ಸೋಂಕಿತರ ಸ್ಥಿತಿಗತಿ ಬಗ್ಗೆ ವಿವರಣೆ ಪಡೆಯಲು ಪ್ರತಿ ಆಸ್ಪತ್ರೆಗೆ ಒರ್ವ ಸಿಬ್ಬಂದಿ ನೇಮಕ ಮಾಡಲಾಗಿದೆ ಇದರ ಸದುಪಯೋಗ ಪಡಿಸಿಕೊಳ್ಳು ಎಂದರು.

ಪ್ರತಿ ದಿನ ಬೆಡ್ ಆಕ್ಸಿಜನ್ ಬಗ್ಗೆ ಮಾಹಿತಿ ಸಾರ್ವಜನಿಕರ ಗಮನಕ್ಕೆ ತರಲು ಸಂಜೆ ಹೆಲ್ತ ಬುಲೆಟಿನ್ ಬಿಡುಗಡೆ ಮಾಡಲಾಗುವುದು. ಬೇರೆ ಜಿಲ್ಲೆ ಮತ್ತು ರಾಜ್ಯದಿಂದ ಬರುವವರ ಮಾಹಿತಿಯನ್ನು ಟಾಸ್ಕಪೋರ್ಸ ತಂಡಕ್ಕೆ ನೀಡಬೇಕು. ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದವರು ಕೋವಿಡ್ ಟೇಸ್ಟ್ ಮಾಡಿಕೊಳ್ಳುವಂತೆ ಮನವಿ ಮಾಡಿದರು.

ಸೆಮಿ ಲಾಕ್‌ಡೌನ್ ಸಂದರ್ಭದಲ್ಲಿ ನಿಗಧಿತ ದರಕ್ಕಿಂದ ಗ್ರಾಹಕರಿಂದ ಹೆಚ್ಚಿನ ಹಣ ವಸೂಲಿ ಮಾಡುವವರ ಮೇಲೆ ನಿರ್ದ್ಯಾಕ್ಷಿಣ್ಯ ಕ್ರಮಕೈಗೊಳ್ಳಲಾಗುವದು. ನಗರದಲ್ಲಿ ಸಿಟಿ ಸ್ಕಾö್ಯನ್‌ಗೆ ಸರಕಾರ ನಿಗಧಿ ಪಡಿಸಿದ ದರಕ್ಕಿಂತ ಹೆಚ್ಚಿನ ದರ ಪಡೆಯುತ್ತಿರುವದು ಗಮನಕ್ಕೆ ಬಂದಿದೆ. ಅಂತವರ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ. ಮುತ್ತಣ್ಣ ಕೊಪ್ಪದ, ನಗರಸಭೆ ಪೌರಾಯುಕ್ತ ಶಿವಾನಂದ ಹಿರೇಮಠ ಇದ್ದರು.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

*ರೈತರು ಸಾಲಕ್ಕೆ ಹೆದರದೇ ಧೈರ್ಯವಾಗಿ ಜೀವನ ಸಾಗಿಸಿ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ : ಮಾನವ ಜನ್ಮ ಪವಿತ್ರವಾದದ್ದು. ಜೀವನವೆಂದ ಮೇಲೆ ಪ್ರತಿಯೊಬ್ಬರಿಗೂ ಕಷ್ಟಗಳು ಬಂದೇ ಬರುತ್ತವೆ. ಜೊತೆಗೆ ಸಾಲವೂ ಕೂಡ ಇದ್ದೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ