ಬೆಂಗಳೂರು : ಕೊರೋನಾ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಘೋಷಣೆಯಾಗಿದ್ದಂತ ಕೊರೋನಾ ಕರ್ಪ್ಯೂನಿಂದ ಕೊರೋನಾ ನಿಯಂತ್ರಣಗೊಂಡಿಲ್ಲ. ಹೀಗಾಗಿ ರಾಜ್ಯಾಧ್ಯಂತ ಮೇ.10ರಿಂದ ಮೇ.24ರವರೆಗೆ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಲಾಗುತ್ತಿದೆ ಎಂಬುದಾಗಿ ಸಿಎಂ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.
ಈ ಕುರಿತಂತೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದಂತ ಅವರು, ಬೆಳಿಗ್ಗೆ ಸುಮಾರು 2 ಗಂಟೆ ಕಾಲ ನಮ್ಮ ಸಚಿವ ಸಂಪುಟದ ಹಿರಿಯ ಸಹೋದ್ಯೋಗಿಗಳ ಜೊತೆಗೆ, ಕೋವಿಡ್ ನಿಯಂತ್ರಣ ಬಾರದ ಈ ಸಂದರ್ಭದಲ್ಲಿ ಯಾವ ರೀತಿಯ ತೀರ್ಮಾನ ಕೈಗೊಳ್ಳಬೇಕು ಎನ್ನುವ ಬಗ್ಗೆ ಚರ್ಚಿಸಲಾಯಿತು. ಈಗ ಅಧಿಕಾರಿಗಳ ಜೊತೆಗೆ ತೀರ್ಮಾನಿಸಿಲಾಗಿದೆ ಎಂದರು.
ರಾಜ್ಯದಲ್ಲಿ ಕೋವಿಡ್ 2ನೇ ಅಲೆ ಅತ್ಯಂತ ಪರಿಣಾಮವಾಗಿದೆ, ಇದನ್ನು ನಿಯಂತ್ರಿಸಲು ವಿಧಿಸಲಾಗಿದ್ದಂತ ಕೊರೋನಾ ಕರ್ಪ್ಯೂ ಹೆಚ್ಚು ಪರಿಣಾಮಕಾರಿ ಆಗಿಲ್ಲ.
ಹೀಗಾಗಿ ದಿನಾಂಕ 10-05-2021ರ ಬೆಳಿಗ್ಗೆ 6 ಗಂಟೆಯವರೆ 24-05-2021ರವರೆಗೆ ಬೆಳಿಗ್ಗೆ 6 ಗಂಟೆಯವರೆಗೆ ಸಂಪೂರ್ಣ ಲಾಕ್ ಡೌನ್ ವಿಧಿಸಲಾಗುತ್ತಿದೆ. ಈ ಅವಧಿಯಲ್ಲಿ ಅಂಗಡಿ, ಬಾರ್, ಹೋಟೆಲ್, ಪಬ್ ನಿರ್ಬಂಧಿಸಲಾಗಿದೆ ಎಂದರು.
ಆಹಾರ, ಹಾಲು, ತರಕಾರಿ ಮಾರಾಟಕ್ಕೆ ಅನುಕೂಲುವಾಗುವಂತೆ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಅನುಮತಿ ನೀಡಲಾಗಿದೆ. ಹಾಲಿನ ಅಂಗಡಿಗಳು ಸಂಜೆ 6 ಗಂಟೆಯವರೆಗೆ ತೆರೆದಿರಲು ಅವಕಾಶ ನೀಡಲಾಗಿದೆ. ತಳ್ಳೋ ಗಾಡಿಯಲ್ಲಿ ಕೂಡ ತರಕಾರಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಆಸ್ಪತ್ರೆಗೆ ಹೋಗದೋದಕ್ಕೆ ಅವಕಾಶ ನೀಡಲಾಗಿದೆ. ಅಗತ್ಯ ವಸ್ತು ಕೊಂಡೊಯ್ಯೋದಕ್ಕೆ ಅವಕಾಶ ನೀಡಲಾಗಿದೆ ಎಂದರು.
ನಿಗಧಿತ ಕಟ್ಟಡದೊಳಗೆ ಜನರನ್ನು ಬಳಸಿಕೊಂಡು ಕೆಲಸ ಮಾಡೋದಕ್ಕೆ ಅವಕಾಶ. ವಿವಾಹದಲ್ಲಿ 50 ಜನರಿಗೆ ಮಾತ್ರ ಭಾಗವಹಿಸೋದಕ್ಕೆ ಅವಕಾಶ ನೀಡಲಾಗಿದೆ. ಹೆಚ್ಚು ಜನರು ಭಾಗವಹಿಸಿದ್ರೇ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.