ಬೆಳಗಾವಿ: ” ಲೋಕಸಭಾ ಉಪಚುನಾವಣೆ ಯಲ್ಲಿ ಸತೀಶ ಜಾರಕಿಹೊಳಿ ಗೆದ್ದರೇ, ಮುಂದಿನ ವಿಧಾನ ಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಸುಳ್ಳೇಭಾವಿ ಗ್ರಾಮದಲ್ಲಿ ಕಾಂಗ್ರೆಸ್ ಉಪಚುನಾವಣೆ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿ,
ದಿಲ್ಲಿಯಿಂದ ಹಳ್ಳಿವರೆಗೂ ಗಣ್ಯರು ಆಗಮಿಸಿದ್ದಾರೆ, ನಮ್ಮೆಲ್ಲ ಮತದಾರರ ಆಶಿರ್ವಾದ್ ಮಾಡಬೇಕು.
ಶಾಸಕಿ ಲಕ್ಷ್ಮೀಗೆ 60 ಸಾವಿರ ಮತಗಳ ಅಂತರದಿಂದ ಗೆಲವುದು ಸಾಧಿಸಲು ಸಹಕರಿದ ಹಾಗೇ ಸತೀಶಗೆ ನೀಡಬೇಕೆಂದು ಮನವಿ ಮಾಡಿಕೊಂಡರು.
ಸತೀಶ ಜಾರಕಿಹೊಳಿ ಬಗ್ಗೆ ಅಪ್ರಚಾರ ಮಾಡುತ್ತಿದ್ದಾರೆ, ಇಂತಹ ವಂದತಿಗೆ ಕಿವಿಗೊಡಬೇಡಿ. ಕೇಂದ್ರ – ರಾಜ್ಯ ಭ್ರಷ್ಟಾಚಾರ ನಡೆಸಿದಾರೆ.
ಎಲ್ಲಾ ಮತದಾರರು ಒಗ್ಗೂಡಿಕೊಂಡು ಮತ ನೀಡಬೇಕು.
ನನ್ನ ಹೆಸರ ಮೇಲೆ ಜನ ವೋಟ್ ಕೊಡುತ್ತಾರೆ. ನಾವು ಏನು ಮಾಡಿದ್ರೂ ಕೂಡ ನಡೆಯುತ್ತದೆ ಎಂಬ ಭ್ರಮೆಯಲ್ಲಿ ಪ್ರಧಾನಿ ಮೋದಿ ಇದ್ದಾರೆ. ಹೀಗಾಗಿ ಬೆಳಗಾವಿ ಜನತೆ ಒಂದು ಬಾರಿ ಕಾಂಗ್ರೆಸ್ಗೆ ಅವಕಾಶ ಕೊಟ್ಟರೆ ಇದರ ಪರಿಣಾಮ ಇಡೀ ದೇಶದಲ್ಲಿ ಆಗುತ್ತದೆ ಎಂದರು.
ಒಂದೇ ಪಕ್ಷಕ್ಕೆ ಸತತವಾಗಿ ಬೆಂಬಲ ಕೊಡುತ್ತಾ ಬಂದಾಗ ದೇಶದಲ್ಲಿ ಏನು ಆಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ. ಬೆಲೆ ಏರಿಕೆ, ರೈತರ ವಿರುದ್ಧದ ಮೂರು ಕಾನೂನು ಜಾರಿ, ಕಾರ್ಮಿಕರ ವಿರುದ್ಧದ ಮೂರು ಕಾನೂನು, ಅದೇ ರೀತಿ ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣ ಮಾಡುವ ಮೂಲಕ ಬಡವರು, ಯುವಕರನ್ನು ಕೇಂದ್ರ ಸರ್ಕಾರ ನಿರುದ್ಯೋಗಿಗಳನ್ನಾಹಿ ಮಾಡುತ್ತಿದೆ. ಅದಕ್ಕಾಗಿ ಈ ಎಲ್ಲಾ ವಿಚಾರಗಳ ವಿರುದ್ಧ ಹೋರಾಡುವಂತಹ ಸದಸ್ಯರ ಅವಶ್ಯಕತೆಯಿದೆ.
ಜನರ ಕಷ್ಟ ಸುಖಗಳ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತುವವರು ಇರದೇ ಹೋದ್ರೆ ಖಂಡಿತವಾಗಿ ಸರ್ವಾಧಿಕಾರಿ ಧೋರಣೆಗೆ ಅವಕಾಶ ಮಾಡಿಕೊಟ್ಟಂತೆ ಆಗುತ್ತದೆ.
ಈಗಾಗಲೇ ಅದು ನಡೆದಿದ್ದು. ಅದು ಇನ್ನು ಮುಂದುವರಿಯುತ್ತದೆ. ಹೀಗಾಗಿ ಸತೀಶ ಜಾರಕಿಹೊಳಿ ಒಳ್ಳೆಯ ಅಭ್ಯರ್ಥಿ ಇದ್ದಾರೆ. ಈ ಬಾರಿ ಒಂದು ಅವಕಾಶ ಕಾಂಗ್ರೆಸ್ ಪಕ್ಷಕ್ಕೆ ಕೊಡಿ ಎಂದು ಮಲ್ಲಿಕಾರ್ಜುನ ಖರ್ಗೆ ಮನವಿ ಮಾಡಿಕೊಂಡರು.
ನೋಟ್ ಬಂದ್ ಮಾಡಿದ್ದರಿಂದ ದೇಶದ ಅದೆಷ್ಟೋ ಸಂಸಾರಗಳು ಹಾಳು ಆದ್ರೂ ಕೂಡ ನಮ್ಮ ದೇಶದ ಯುವಕರು ಮೋದಿ ಹೆಸರು ಕೇಳಿದ್ರೆ ಯಾಕೆ ಚಪ್ಪಾಳೆ ಹೊಡೆಯುತ್ತಾರೆ ಎಂದು ನನಗೆ ಅರ್ಥ ಆಗುತ್ತಿಲ್ಲ. ದಿಢೀರ್ನೆ ಹೋದ ವರ್ಷ ಲಾಕ್ಡೌನ್ ಘೋಷಣೆ ಮಾಡಿದ್ದರಿಂದ ಸಾಕಷ್ಟು ಸಮಸ್ಯೆ ಉಂಟಾಗಿತ್ತು. ಅವರ ಎಲ್ಲಾ ಯೋಜನೆಗಳು, ಬಡ-ಮಧ್ಯಮ ವರ್ಗ, ವಿಶೇಷವಾಗಿ ಯುವಕರಿಗೆ ತೊಂದರೆಯಾಗುತ್ತಿದೆ. ಅದಕ್ಕಾಗಿ ಇಲ್ಲಿ ಪಾಠ ಕಲಿಸಿದ್ರೆ ನಾನು ಏನು ಮಾಡುತ್ತಿದ್ದೇನೆ, ಅದು ಸರಿಯಿಲ್ಲ ಎಂಬುದು ಪ್ರಧಾನಿ ಮೋದಿಗೂ ಗೊತ್ತಾಗುತ್ತದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಈ ಸಂದರ್ಭದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪಸಿಂಗ್ ಸುರ್ಜೆವಾಲಾ,
ಮಾಜಿ ಸಚಿವರಾದ ಡಿಕೆಶಿವಕುಮಾರ್, ಸತೀಶ ಜಾರಕಿಹೊಳಿ, ಎಸ್ ಆರ್ ಪಾಟೀಲ, ಆರ್ ಬಿ ದೇಶಪಾಂಡೆ, ರಾಮಲಿಂಗಾರೆಡ್ಡಿ, ಎಂ ಬಿ ಪಾಟೀಲ, ಮಾಜಿ ಸಂಸದ ಪ್ರಕಾಶ ಹುಕ್ಕೇರಿ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ್, ಕೆಪಿಸಿಸಿ ಕಾರ್ಯಾದ್ಯಕ್ಷರು ಸಲೀಂ ಅಹ್ಮದ, ಮಾಜಿ ಕೇಂದ್ರ ಸಚಿವ ಕೆ ಎಚ್ ಮುನಿಯಪ್ಪಹಾಗೂ ಕಾಂಗ್ರೆಸ್ ಕಾರ್ಯಕರ್ತರ ಇತರರು ಇದ್ದರು.